ಹುಲಿಯೂರುದುರ್ಗ: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಬೆಂಗಳೂರಿನಿಂದ ಸೋಮವಾರಪೇಟೆಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 85ರ ಸುಗ್ಗನಹಳ್ಳಿ ಬಳಿ ಮಂಗಳವಾರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಉಂಗ್ರ ಗ್ರಾಮದ ಹುಚ್ಚೆಗೌಡ (60)ಮೊಮ್ಮಗ ಪ್ರೀತಮ್ (11), ನಿಂಗಮ್ಮ (55) ಮೃತರು. ಉಂಗ್ರ ಗ್ರಾಮದಿಂದ ಹುಲಿಯೂರುದುರ್ಗದ ಕಡೆಗೆ ತೆರಳುತ್ತಿದ್ದ ವೇಳೆ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ. ಬೈಕ್ನಲ್ಲಿ ಮೂವರು ತೆರಳುತ್ತಿದ್ದು, ಸ್ಥಳದಲ್ಲೆ ತಾತ ಮೊಮ್ಮಗ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ನಿಂಗಮ್ಮ ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಮೃತೂರು ಸಿಪಿಐ ಮಾಧ್ಯನಾಯಕ್, ಕುಣಿಗಲ್ ಸಿಪಿಐ ನವೀನ್ಗೌಡ, ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.