ಬೀಕರ ಅಪಘಾತದಲ್ಲಿ ಮೂವರು ಸಾವು

FotoJet 222222
Published on

10 ಮಂದಿಗೆ ಗಾಯ | ಬಂಗಾರಪೇಟೆಯ ಐತಾಂಡ್ಲಹಳ್ಳಿ ಬಳಿ ಘಟನೆ | ಅಡುಗೆ ಮಾಡಲು ಹೋದವರು ಮಸಣದತ್ತ

ಬಂಗಾರಪೇಟೆ: ತಾಲೂಕಿನ ಐತಾಂಡಹಳ್ಳಿ ಬಳಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅಡುಗೆ ಮಾಡಲು ತೆರಳಿದ್ದ ಕಾರ್ಮಿಕರು ಸಂಜೆ 7 ಗಂಟೆ ಸುಮಾರಿಗೆ ಟೆಂಪೋದಲ್ಲಿ ವಾಪಸ್​ ಬೆಂಗಳೂರಿಗೆ ಹೋಗುವಾಗ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು,10 ಮಂದಿಗೆ ಗಂಭೀರ ಗಾಯಗಳಾಗಿವೆ.

ಅಡುಗೆ ಸಿಬ್ಬಂದಿ ಕರೆದೊಯ್ಯುತ್ತಿದ್ದ ವಾಹನ ಚಾಲಕ ಶಿವರಾಜು, ಆಂಬುಲೆನ್ಸ್​ ಚಾಲಕ ವಿಕ್ರಮ್​ಪಾಲ್​ ಮೃತರು. ಮತ್ತೊಬ್ಬನ ವಿಳಾಸ ಪತ್ತೆಯಾಗಿಲ್ಲ.

ಗಾಯಗೊಂಡ 10 ಮಂದಿಗೆ ಬಂಗಾರಪೇಟೆ, ಕೆಜಿಎ್​ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕೋಲಾರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳದಲ್ಲೇ ಇಬ್ಬರು, ಕೆಜಿಎ್​ ಆಸ್ಪತ್ರೆಯಲ್ಲಿ ಒಬ್ಬರು ಅಸುನೀಗಿದ್ದಾರೆ. ಗಾಯಾಳೆಲ್ಲರೂ ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರು ಎನ್ನಲಾಗಿದೆ. ಇಬ್ಬರ ಮೃತದೇಹವನ್ನು ಬಂಗಾರಪೇಟೆ ಆಸ್ಪತ್ರೆಯಲ್ಲಿ, ಒಬ್ಬರ ಮೃತದೇಹವನ್ನು ಕೆಜಿಫ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

ಏನಿದು ಟನೆ?: ಐತಾಂಡ್ಲಹಳ್ಳಿಯಲ್ಲಿ ಕೆಲಸ ಮುಗಿಸಿಕೊಂಡು ಒಂದು ಕಿಮೀ ಹೋಗಿ ಬೆಂಗಳೂರು ಮಾರ್ಗದ ಕಡೆ ತಿರುವು ತೆಗೆದುಕೊಳ್ಳುವಾಗ ಇಳಿಜಾರಿನಲ್ಲಿ ಟೆಂಪೋಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿಯಾಗಿದೆ. ಇದೇ ವೇಳೆ ಸ್ಥಳಕ್ಕೆ ಬಂದಿದ್ದ ಹೈವೇ ಆಂಬುಲೆನ್ಸ್​ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಆಂಬುಲೆನ್ಸ್​ ಚಾಲಕ ಮೃತಪಟ್ಟಿದ್ದಾನೆ. ಟೆಂಪೋದಲ್ಲಿ ಒಟ್ಟು 21 ಮಂದಿ ಇದ್ದರು ಎನ್ನಲಾಗಿದೆ. ಟನಾ ಸ್ಥಳಕ್ಕೆ ಕೆಜಿಎ್​ ವರಿಷ್ಠಾಧಿಕಾರಿ ಶಿವಾಂಶು ರಜಪೂತ್​, ಬಂಗಾರಪೇಟೆ ಪೊಲೀಸ್​ ಇನ್​ಸ್ಪೆಕ್ಟರ್​ ದಯಾನಂದ್​, ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net