

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ಯಾಂಟರ್ ಪಲ್ಟಿಯಾಗಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಹೊರವಲಯದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಬೆಳಗಾವಿ ಜಿಲ್ಲೆ ಶಿರಸಂಗಿ ಗ್ರಾಮದ ಹನುಮಂತಪ್ಪ ಮಲ್ಲಾಡ, ಮಹಾಂತೇಶ ಚವ್ಹಾಣ, ಮಹಾದೇವಪ್ಪ ಹುಲ್ಲೊಳ್ಳಿ ಮೃತರು ಎಂದು ತಿಳಿದುಬಂದಿದೆ.
ಮಹಾದೇವಪ್ಪ ಹುಲ್ಲೊಳ್ಳಿ ಎಂಬುವರು ಕಳೆದ ೮ ವರ್ಷಗಳಿಂದ ಹೊಟ್ಟಿನ ವ್ಯಾಪಾರ ಮಾಡುತ್ತಿದ್ದರು. ಮೇವು ಮತ್ತು ಹೊಟ್ಟನ್ನು ಕ್ಯಾಂಟರ್‌ನಲ್ಲಿ ತುಂಬಿಕೊAಡು ಗೋವಾದ ಡೇರಿಗಳಿಗೆ ನೀಡುವ ವ್ಯಾಪಾರ ಮಾಡುತ್ತಿದ್ದರು. ಭಾನುವಾರ ಸಂಜೆ ಗ್ರಾಮದಿಂದ ಮೇವು, ಹೊಟ್ಟನ್ನು ತುಂಬಿಕೊAಡು ಹೊರಟಿದ್ದರು. ಕಡಬಗಟ್ಟಿ ಬಳಿ ನಿಯಂತ್ರಣ ಕಳೆದುಕೊಂಡ ವಾಹನ ಪಲ್ಟಿಯಾಗಿದೆ. ಎದುರಿನಿಂದ ಬರುತ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಸಂಬAಽಕರ ದುಃಖದ ಕಟ್ಟೆಯೊಡೆದಿತ್ತು.
ಮತ್ತೊಂದೆಡೆ ಟಿಟಿ ವಾಹನದಲ್ಲಿದ್ದ ಮೂವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸïಗೆ ದಾಖಲಿಸಲಾಗಿದೆ. ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.