ಒಂದೇ ಮನೆಯಲ್ಲಿ ಮೂವರು ಜಡ್ಜ್‌ಗಳು

Judge
Published on

ಭಟ್ಕಳ: ಕರ್ನಾಟಕದ ಉಚ್ಚ ನ್ಯಾಯಾಲಯವು ಅಧಿಸೂಚನೆಗೊಳಿಸಿದ 33 ಸಿವಿಲ್ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಎಚ್.ಜೆ. ಶ್ರೇಯಾ ಆಯ್ಕೆಯಾಗಿದ್ದಾರೆ.

ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ಜೆ. ನಾಯ್ಕ ಹಾಗೂ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ರೂಪಾ ನಾಯ್ಕ ಅವರ ಪುತ್ರಿಯಾಗಿರುವ ಇವರು ಮೂಲತಃ ಕುಮಟಾದ ಹೆಗಡೆ ಗ್ರಾಮದವರು.

ಒಂದೇ ಮನೆಯ ಮೂವರು ನ್ಯಾಯಾಧೀಶರಾಗಿರುವುದು ವಿಶೇಷ. ರೂಪಾ ನಾಯ್ಕ ಅವರು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾಗಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದಾರೆ. ಇವರ ಹಿರಿಯ ಸಹೋದರಿ ಶಿಲ್ಪ ಎಚ್. ಜೆ., 2019ರ ಬ್ಯಾಚ್‌ನಲ್ಲಿ ನ್ಯಾಯಾಧೀಶೆಯಾಗಿ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದೇ ಮನೆಯ ಮೂವರು ಮಹಿಳೆಯರು ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲೇ ಪ್ರಥಮ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net