ಮನೆಯ ಗೋಡೆ ಕುಸಿದು ಮೂವರಿಗೆ ಗಾಯ

channapur
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸತತ ಮಳೆಯಿಂದ ತಾಲೂಕಿನ ಚನ್ನಾಪೂರ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದು ಮೂವರು ಗಾಯಗೊಂಡಿದ್ದಾರೆ.

ಯಲ್ಲವ್ವ ನಡೂರ, ಮುತ್ತಪ್ಪ ನಡೂರ ಹಾಗೂ ಗಂಗವ್ವ ಗುರುಶಿದ್ದಪ್ಪ ಹುಲಮನಿ ಗಾಯಗೊಂಡವರು. ಅಂಚಟಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಸಿ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದರು.

ಕಳೆದ 24 ಗಂಟೆಗಳ ಅವಧಿಯಲ್ಲಿ ಹುಬ್ಬಳ್ಳಿ ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ 10.2 ಮಿ.ಮೀ., ಛಬ್ಬಿ 9.4 ಮಿ.ಮೀ., ಶಿರಗುಪ್ಪಿ 8.6 ಮಿ.ಮೀ. ಹಾಗೂ ಬ್ಯಾಹಟ್ಟಿ ಹೋಬಳಿಯಲ್ಲಿ 8.4 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net