ಮುಂಗಾರು ಬಿರುಸು: ಮೂರು ಮನೆ, ಒಂದು ಕೊಟ್ಟಿಗೆಗೆ ಹಾನಿ

06 tth 02
ಬಾಂಡ್ಯ-ಕುಕ್ಕೆ ಗ್ರಾಪಂ ವ್ಯಾಪ್ತಿಯ ಗಂಟೆಜನಗಲ್ ಗ್ರಾಮದ ವೇದಾ ವಾಸು ಪೂಜಾಾರಿ ಅವರ ಮನೆಯ ಗೋಡೆ ಕುಸಿದಿರುವುದು.
Published on

ತೀರ್ಥಹಳ್ಳಿ: ಮುಂಗಾರು ಒಮ್ಮೆಲೇ ಬಿರುಸುಗೊಂಡ ಹಿನ್ನೆಲೆಯಲ್ಲಿ ಮಳೆ ಗಾಳಿಯ ಅಬ್ಬರದಿಂದ ತಾಲೂಕಿನಲ್ಲಿ ಮೂರು ಮನೆಗಳು ಹಾಗೂ ಒಂದು ಕೊಟ್ಟಿಗೆಗೆ ಹಾನಿಯಾಗಿದೆ.

ಸಾಲ್ಗಡಿ ಗ್ರಾಪಂ ವ್ಯಾಪ್ತಿಯ ವಿಜಯ ವಿಠಲ ನಾಯಕ್ ಎಂಬುವವರ ಮನೆಯ ಮೇಲೆ ಭಾರಿ ಗಾತ್ರದ ಮರ ಉರುಳಿ ಬಿದ್ದು ಮನೆಯ ಮಾಡು ಜಖಂಗೊಂಡಿದೆ. ಶೇಡ್ಗಾರು ಗ್ರಾಪಂಯ ಬೊಮ್ಮನಹಳ್ಳಿ ಗ್ರಾಮದ ಸರೋಜಶೆಟ್ಟಿ ಅವರ ಮನೆ ಸಮೀಪದಲ್ಲಿರುವ ಕೊಟ್ಟಿಗೆ ಕುಸಿದಿದ್ದು ಜಾನುವಾರುಗಳಿಗೂ ಪೆಟ್ಟಾಗಿದೆ. ಬಾಂಡ್ಯ-ಕುಕ್ಕೆ ಗ್ರಾಪಂ ವ್ಯಾಪ್ತಿಯ ಗಂಟೆ ಜನಗಲ್ ಗ್ರಾಮದ ವೇದಾ ವಾಸು ಪೂಜಾರಿ ಅವರ ಮನೆಯ ಗೋಡೆ ಕುಸಿದಿದೆ. ದೇವಂಗಿ ಗ್ರಾಪಂ ವ್ಯಾಪ್ತಿಯಲ್ಲೂ ಒಂದು ಮನೆಯ ಗೋಡೆ ಕುಸಿದು ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net