ಮೂರು ಗೃಹಲಕ್ಷ್ಮೀ ಸೇವಾ ಕೇಂದ್ರ ಆರಂಭ

Three Greatakshmi Service Center Start
ಬಾದಾಮಿಯ ನಗರವನದ ಪುರಸಭೆಯ ಮಳಿಗೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಸೇವಾ ಕೇಂದ್ರ ಕಾಯಾರಂಭ ಮಾಡಲಾಯಿತು. ಮುಖ್ಯಾಧಿಕಾರಿ ಬಂದೇನವಾಜ್ ಡಾಂಗೆ ಹಾಗೂ ಸಿಬ್ಬಂದಿ ಇದ್ದರು.
Published on

ಬಾದಾಮಿ: ನಗರದ ಲೋಕೋಪಯೋಗಿ ಇಲಾಖೆ ಆವರಣ, ನಗರವನದ ಪುರಸಭೆಯ ಮಳಿಗೆ, ಸ್ಟೇಷನ್ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಗುರುವಾರದಿಂದ ಆಡಳಿತ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆಯ ಸೇವಾ ಕೇಂದ್ರಗಳು ಕಾರ್ಯಾರಂಭಗೊಂಡಿವೆ.

ನಗರದ ಜನತೆ ಈ ಯೋಜನೆಯಡಿ ಸರ್ಕಾರದ ಹೆಲ್ಫ್‌ಲೈನ್ ನಂಬರ್‌ದಿಂದ ಫಲಾನುಭವಿಗಳ ಮೊಬೈಲ್ ನಂಬರ್‌ಗೆ ಅರ್ಜಿ ಸಲ್ಲಿಸಲು ಸಂದೇಶ ಬರುತ್ತದೆ.

ಆಯಾ ಫಲಾನುಭವಿಗಳು ಸಂಬಂಧಿಸಿದ ಸೇವಾ ಕೇಂದ್ರಕ್ಕೆ ಪಡಿತರ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಸಂದೇಶ ಬಂದಿರುವ ಮೊಬೈಲ್ ಮೂಲ ದಾಖಲಾತಿಗಳೊಂದಿಗೆ ಕೇಂದ್ರಕ್ಕೆ ಆಗಮಿಸಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ನಂತರ ಸ್ವೀಕೃತ ಪ್ರತಿ ಪಡೆದುಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಬಂದೇನವಾಜ್ ಡಾಂಗೆ ತಿಳಿಸಿದರು.

ಪುರಸಭೆ ಸಿಬ್ಬಂದಿ ಐಟಿ ವಿಭಾಗದ ಮಹಾಂತೇಶ ನಾಗನೂರ, ಕಿರಿಯ ಅಭಿಯಂತರ ಸಹಾಯಕ ಮಂಜು ಮಡಿವಾಳರ, ಲಕ್ಷ್ಮೀ ಪಟ್ಟಣಶೆಟ್ಟಿ, ಸದ್ದಾಂಹುಸೇನ್ ದೊಡಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net