ಹುಲಿ ದಾಳಿಗೆ ಮೂರು ಆಡುಗಳು ಬಲಿ

tiger-007
Published on

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಬಾಳಲೆ ಗ್ರಾ.ಪಂ. ವ್ಯಾಪ್ತಿಯ ರುದ್ರಬೀಡು ಗ್ರಾಮದಲ್ಲಿ ಹುಲಿ ದಾಳಿಗೆ ಆಡುಗಳು ಬಲಿಯಾಗಿವೆ.


ಹೊನ್ನಿಕೊಪ್ಪಲಿನ ಎಂ.ಬಿ.ಸಣ್ಣಪ್ಪ ಅವರ 3 ಆಡುಗಳನ್ನು ಗದ್ದೆಯಲ್ಲಿ ಮೇಯಲು ಕಟ್ಟಿಹಾಕಿದ್ದ ಸಂದರ್ಭ ಶುಕ್ರವಾರ ಮಧ್ಯಾಹ್ನ ಹುಲಿ ದಾಳಿ ನಡೆಸಿದೆ. ತಿತಿಮತಿ ಡಿ ಆರ್‌ಎಫ್‌ಒ ಹಾಲೇಶ್, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಕಳೆದ ವಾರ ಇದೇ ಸ್ಥಳದಲ್ಲಿ ಹುಲಿ ದಾಳಿಯಿಂದ ಮೃತಪಟ್ಟಿದ್ದ ಕಾಡುಹಂದಿಯ ಕಳೇಬರ ಪತ್ತೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net