

ಮೈಸೂರು: ಮೂವರು ಸುಲಿಗೆಕೋರರನ್ನು ಬಂಧಿಸಿರುವ ಜಿಲ್ಲಾ ಪೊಲೀಸರು ಒಂದು ಮೊಬೈಲ್ ಫೋನ್, ದಾಖಲಾತಿಗಳಿದ್ದ ಬ್ಯಾಗ್ ಹಾಗೂ ಸುಲಿಗೆ ಮಾಡಲು ಉಪಯೋಗಿಸಿದ್ದ 2 ಸ್ಕೂಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ.ಆರ್.ನಗರ ತಾಲೂಕಿನ ಕೆಸ್ತೂರು ನಿವಾಸಿ ಕೆ.ಬಿ.ವೀರಭದ್ರ ಸೆ.9ರಂದು ರಾತ್ರಿ 11.30ರಲ್ಲಿ ಸುಜುಕಿ ಆಲ್ಟೋ ಕಾರಿನಲ್ಲಿ ಇಲವಾಲ ಗ್ರಾಮದ ಬಳಿ ಪ್ರಯಾಣಿಸುವ ವೇಳೆ ಮೂವರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿ, ಹಲ್ಲೆ ಮಾಡಿದ್ದಾರೆ.
ಕಾರಿನ ಗ್ಲಾಸ್‌ನ್ನು ಒಡೆದು ಹಾಕಿ, 45 ಸಾವಿರ ರೂ. ಬೆಲೆಬಾಳುವ ಮೊಬೈಲ್ ಫೋನ್ ಹಾಗೂ ದಾಖಲಾತಿಗಳಿದ್ದ ಬ್ಯಾಗನ್ನು ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ವೀರಭದ್ರ ನೀಡಿದ್ದ ದೂರು ಆಧರಿಸಿ ಇಲವಾಲ ಪೊಲೀಸರು ಸುಲಿಗೆ ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯ ಕೈಗೊಂಡು, ಬುಧವಾರ ಆರೋಪಿಗಳನ್ನು ಬಂಧಿಸಿದ್ದಾರೆ.