ತ್ರೈ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಹ್ವಾನ

Drwaing
Published on

ಮಂಗಳೂರು: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಡಿ.18ರಂದು ಮಂಗಳೂರಿನ ಕೆನರಾ ಸ್ಕೂಲ್ ಉರ್ವ ಇದರ ಮಿಝಾರ್ ಗೋವಿಂದ ಪೈ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜಿಸಿರುವ ನೂರೊಂದು ಕವಿಗಳ ಸಮಾಗಮದ ವಿನೂತನ ‘ಕಾವ್ಯ ದಶಾವತಾರ- ಕವಿಕಾವ್ಯಸಮ್ಮಾನ’ ಪ್ರಯುಕ್ತ ಅದೇ ದಿನ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ‘ನಮ್ಮ ಮನೆ’, 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ’ನಮ್ಮ ಪರಿಸರ’, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ನಮ್ಮೂರ ಹಬ್ಬ’ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ‘ಡಿಜಿಟಲ್ ಇಂಡಿಯಾ’ ವಿಷಯಗಳನ್ನು ನೀಡಲಾಗಿದೆ. ಚಿತ್ರಗಳನ್ನು ಸ್ಥಳದಲ್ಲೇ ಬಿಡಿಸಬೇಕು. ಸ್ಪರ್ಧೆಯ ಅವಧಿ ಎರಡು ಗಂಟೆ. ಏ-ತ್ರಿ ಗಾತ್ರದ ಡ್ರಾಯಿಂಗ್ ಶೀಟ್ ಮತ್ತು ಚಿತ್ರ ಬಿಡಿಸಲು ಬೇಕಾಗುವ ಸಾಮಗ್ರಿಗಳನ್ನು ವಿದ್ಯಾರ್ಥಿಗಳೇ ತರಬೇಕು. ಪ್ರತಿ ವಿಭಾಗದಲ್ಲಿ ತಲಾ ಮೂರು ಬಹುಮಾನಗಳಿವೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಗುತ್ತದೆ. ಭಾಗವಹಿಸಲಿಚ್ಚಿಸುವ ವಿದ್ಯಾರ್ಥಿಗಳು ಅಥವಾ ಅವರ ಪಾಲಕರು ಡಿ.15ರೊಳಗೆ ತಮ್ಮ ಹೆಸರುಗಳನ್ನು 9108425813/8310388415 ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡಿ ನೋಂದಾಯಿಸಿಕೊಳ್ಳಬೇಕು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net