ಬೈಕ್ ಅಪಘಾತದಲ್ಲಿ ಮೂವರು ಸಾವು

Untitled 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ತಾಲೂಕಿನ ಬೇಲೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಕೋಟೂರ ನಿವಾಸಿ ಇರ್ಫಾನ್ ಹುಸೇನಸಾಬ ಸಂಗೊಳ್ಳಿ (18), ಹೆಗ್ಗೇರಿಯಲ್ಲಿ ವಾಸಿಸುತ್ತಿದ್ದ ನರಗುಂದ ತಾಲೂಕಿನ ಜಗಾಪುರ ಗ್ರಾಮದ ಶಿವರಾಜ ಹನಮಪ್ಪ ಮುದಕಣ್ಣನವರ (23) ಹಾಗೂ ಕೋಟೂರಲ್ಲಿ ವಾಸಿಸುತ್ತಿದ್ದ ಬೈಲಹೊಂಗಲದ ಜುಬೇರ್ ಜಮೀರ್‌ಅಹ್ಮದ ಬಾಗೇವಾಡಿ (18) ಮೃತ ಯುವಕರು. ಮೂವರು ಒಂದೇ ಬೈಕ್‌ನಲ್ಲಿ ಕೋಟೂರಿಗೆ ಹೊರಟ್ಟಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net