ಬಟ್ಟೆ-ಚಪ್ಪಲಿಯಿಂದಾಗಿ ಮೂರು ಶವಗಳು ಪತ್ತೆ; ಒಟ್ಟಿಗೇ ಸಾವಿಗೀಡಾದ ಸ್ನೇಹಿತರು...

death
ಸಾಂದರ್ಭಿಕ ಚಿತ್ರ
Published on

ತುಮಕೂರು: ಬೇಸಿಗೆ ರಜೆ ಎಂದು ಮಕ್ಕಳ ಬಗ್ಗೆ ಉದಾಸೀನ ಬೇಡ. ಏಕೆಂದರೆ ಆಟಕ್ಕೆಂದು ಹೋದ ಮಕ್ಕಳು ಅಪಾಯಕ್ಕೆ ಒಳಗಾಗಬಹುದು. ಮಾತ್ರವಲ್ಲ, ಆಟ ಪ್ರಾಣಕ್ಕೇ ಮುಳುವಾಗುವ ಸಾಧ್ಯತೆ ಇರುತ್ತದೆ. ಹೀಗಾದ ಅನೇಕ ಉದಾಹರಣೆಗಳಿದ್ದು, ಇಂದು ಇಂಥದ್ದೇ ಮತ್ತೊಂದು ಅವಘಡ ಸಂಭವಿಸಿದ್ದು, ಮೂವರು ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ.

ತುಮಕೂರು ಜಿಲ್ಲೆಯ ಭರತ್ (12), ಆನಂದ್ (10) ಹಾಗೂ ವಿಶ್ವಾಸ್ (11) ಸಾವಿಗೀಡಾಗಿರುವ ಬಾಲಕರು. ತುಮಕೂರು ನಗರ ಹೊರವಲಯದ ತಿಮ್ಮಲಾಪುರದಲ್ಲಿ ಇಂದು ಈ ಅವಘಡ ಸಂಭವಿಸಿದೆ.

ಮಧ್ಯಾಹ್ನ ತಿಮ್ಮಲಾಪುರ ಕೆರೆಯಲ್ಲಿ ಈಜಲು ತೆರಳಿದ್ದ ಈ ಮೂವರು ಸ್ನೇಹಿತರು ದುರದೃಷ್ಟವಶಾತ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆರೆಯ ದಡದಲ್ಲಿ ಬಟ್ಟೆ-ಚಪ್ಪಲಿ ಇದ್ದುದ್ದರಿಂದ ಯುವಕರು ನೀರಿನಲ್ಲಿ ಮುಳುಗಿರುವುದು ಪತ್ತೆಯಾಗಿದೆ. ಮೂವರು ಶವಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net