ಗಣಿ ಕುಸಿತವಾಗಿ ಮೂರನೇ ದಿನ, 2 ದಿವಸ ಕಾರ್ಯಾಚರಣೆ, ಇಂದಿಗೆ 3 ಶವ ಪತ್ತೆ..

Chamarajanagar 1
Published on

ಚಾಮರಾಜನಗರ: ಇಲ್ಲಿನ ಕಲ್ಲು ಗಣಿಯಲ್ಲಿ ಕುಸಿತವಾಗಿ ಸಂಭವಿಸಿದ ದುರಂತದ ಮೂರನೇ ದಿನವಾದ ಇಂದು ಸಾವಿನ ಸಂಖ್ಯೆ ಇದೀಗ ಮೂರಕ್ಕೇರಿದೆ. ಇವತ್ತು ನಡೆದ ಕಾರ್ಯಾಚರಣೆಯಲ್ಲಿ ಮತ್ತೊಂದು ಶವ ಪತ್ತೆಯಾಗಿದೆ.

ಒಟ್ಟು ಮೂರು ಮಂದಿ ಈ ಕುಸಿತ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದ್ದು, ಮೂರನೆಯದಾಗಿ ಸರ್ಫರಾಜ್ ಶವ ಇಂದು ಸಿಕ್ಕಿದೆ. ಬೊಮ್ಮಲಾಪುರ ಗ್ರಾಮದ ಮಹೇಂದ್ರಪ್ಪ ಎಂಬುವವರ ಜಾಗದಲ್ಲಿ ಕೇರಳ ಮೂಲದ ಉದ್ಯಮಿ ಹಕೀಮ್​ ಎಂಬಾತ ಗುತ್ತಿಗೆ ಪಡೆದು ಬಿಳಿಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಗಣಿಗಾರಿಕೆ ವೇಳೆ ಬಂಡೆಯೊಂದು ಜೆಸಿಬಿ ಮತ್ತು ಟಿಪ್ಪರ್​ ಮೇಲೆ ಬಿದ್ದು ದುರಂತ ಸಂಭವಿಸಿದೆ ಎನ್ನಲಾಗಿದೆ.

ಇದರಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಸಲುವಾಗಿ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಲಾಗಿದ್ದು, ದುರದೃಷ್ಟವಶಾತ್ ಮೂವರೂ ಶವವಾಗಿ ಪತ್ತೆಯಾಗಿದ್ದಾರೆ. ಎರಡು ದಿನಗಳಿಂದಲೂ ನಡೆದಿದ್ದ ಕಾರ್ಯಾಚರಣೆಯಲ್ಲಿ ಎನ್​ಡಿಆರ್​ಎಫ್- ಎಸ್​ಡಿಆರ್​ಎಫ್​ ಮತ್ತು ಅಗ್ನಿಶಾಮಕ ಸಿಬ್ಬಂದಿ ಪಾಲ್ಗೊಂಡಿದ್ದರು.

ದೊಡ್ಡ ಬಂಡೆಗಳನ್ನು ಸಿಡಿಮದ್ದು ಸಿಡಿಸಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ನಿನ್ನೆ ಅಜಿಮುಲ್ಲಾ ಹಾಗೂ ಇಂದು ಬೆಳಗ್ಗೆ ಮಿರಾಜ್ ಶವ ಪತ್ತೆಯಾಗಿತ್ತು. ಇದೀಗ ಸರ್ಫರಾಜ್ ಮೃತದೇಹ ಪತ್ತೆಯಾದ್ದರಿಂದ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net