ರೈತರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ

Kailancha-Ph-0002-Negila Yogi-Ananthu Keremegaladoddi Raitha Story - PappayaThota-30-12-2023
Published on

ಮೈಸೂರು:ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿಯಲ್ಲಿ ಫೆ.12 ರಿಂದ ಫೆ.14 ರವರೆಗೆ “ತೆಂಗು ಮತ್ತು ಅಡಿಕೆ ಬೆಳೆಗಳಲ್ಲಿ ತಳಿ ಆಯ್ಕೆ, ಆಧುನಿಕ ಕೃಷಿ ಪದ್ದತಿಗಳು, ಸೂಕ್ಷ್ಮನೀರಾವರಿ ಮತ್ತು ರಸಾವರಿ ತಾಂತ್ರಿಕತೆಗಳ ಅಳವಡಿಕೆ ಮೂಲಕ ಅಧಿಕ ಲಾಭ” ಎಂಬ ವಿಷಯದ ಬಗ್ಗೆ ರೈತರು/ ರೈತಮಹಿಳೆಯರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

 ತರಬೇತಿಯಲ್ಲಿ ಭಾಗವಹಿಸುವ ರೈತರು,ರೈತಮಹಿಳೆಯರಿಗೆ ಊಟದ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಆಸಕ್ತ ರೈತರು/ ರೈತಮಹಿಳೆಯರು ತಮ್ಮ ಹೆಸರನ್ನು ಕೃಷಿ ಅಧಿಕಾರಿಯವರ ದೂರವಾಣಿ ಸಂ:8277933177 ಗೆ ಕರೆಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸತಕ್ಕದ್ದು. ಕೇವಲ ಮೈಸೂರು ಜಿಲ್ಲೆಯ 30 ರೈತರು/ ರೈತಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ಮೊದಲು ನೋಂದಣಿ ಮಾಡಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net