

ಉಡುಪಿಯ ಮಣಿಪಾಲದಲ್ಲಿರುವ ತ್ರಿವರ್ಣ ಆರ್ಟ್ ಗ್ಯಾಲರಿಯಲ್ಲಿ ತ್ರಿವರ್ಣ ಆರ್ಟ್ ಕ್ಲಾಸ್ನ 7ರಿಂದ 18 ವರ್ಷದೊಳಗಿನ 32 ವಿದ್ಯಾರ್ಥಿಗಳು ಚಿತ್ರಿಸಿರುವ ನಮ್ಮೂರು ಮೂರು ದಿನದ ಚಿತ್ರಕಲಾ ಪ್ರದರ್ಶನಕ್ಕೆ ಸೆಪ್ಟೆಂಬರ್ 5ರಂದು ಬೆಳಗ್ಗೆ ಚಾಲನೆ ನೀಡಿ ಮಾತನಾಡಿದರು.
ಮಣಿಪಾಲದ ರೋಟರಿ ಕ್ಲಬ್ ಅಧ್ಯಕ್ಷೆ ಶಶಿಕಲಾ ರಾಜವರ್ಮ ಮಾತನಾಡಿ ನಮ್ಮ ಊರು, ರಾಜ್ಯ, ದೇಶದ ಕುರಿತು ಅಭಿಮಾನ ಇರಬೇಕು. ಇಂದಿನ ಮಕ್ಕಳಲ್ಲಿ ಅಭಿವ್ಯಕ್ತಿ ಜ್ಞಾನದ ಕೊರತೆಯಿದೆ. ಹೀಗಾಗಿ ಭಾವನೆಗಳನ್ನು ಬಿತ್ತರಿಸಲು ಚಿತ್ರಕಲೆ ಅತ್ಯಂತ ಸೂಕ್ತ ಕ್ಷೇತ್ರವಾಗಿದೆ. ಪರಿಸರ, ಪಾಲಕರು ಹಾಗೂ ಗುರು- ಹಿರಿಯರನ್ನು ಗೌರವಿಸುವ, ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಕಲಾ ವಿದ್ಯಾರ್ಥಿನಿಯರಾದ ದೇವಾಂಗನಾ, ಹರ್ಷಿಣಿ, ಸುದೀಕ್ಷಾ ಪ್ರಾರ್ಥಿಸಿದರು. ಕಲಾ ವಿದ್ಯಾರ್ಥಿನಿ ಗ್ರೀಷ್ಮಾ ಸ್ವಾಗತಿಸಿದರು. ಕಲಾವಿದ್ಯಾರ್ಥಿನಿ ಸಂಜನಾ ಕಾಮತ ವಂದಿಸಿದರು. ಸೌಮ್ಯಾ ಎಂ. ನಾಯಕ ಕಾರ್ಯಕ್ರಮ ನಿರೂಪಿಸಿದರು.
ತಮ್ಮಲ್ಲಿರುವ ಪ್ರತಿಭೆಯನ್ನು ವರ್ಣಗಳಲ್ಲಿ ಪ್ರದರ್ಶಿಸಿದ ಮಕ್ಕಳಿಗೆ, ಪ್ರಭಾವಿಸಿದ ಕಲಾ ಗುರು ಹರೀಶ ಸಾಗಾ ಅವರ ಶ್ರಮಕ್ಕೆ ಶರಣು. ಕಲೆಯ ಮೂಲಕ ನಮ್ಮೂರಿನ ಕುರಿತು ಅಭಿಮಾನ ಬೆಳೆಸಿಕೊಂಡ ಮಕ್ಕಳಿಗೂ ಕೃತಜ್ಞತೆ. ನಮ್ಮೂರಷ್ಟೇ ಅಲ್ಲ, ಇಡೀ ವಿಶ್ವವೇ ನಮ್ಮೂರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. | ವಿದುಷಿ ಪಾವನಾ ಆಚಾರ್ಯ. ನಿರ್ದೇಶಕಿ, ಕಲಾ ಸ್ಪಂದನ, ಮಣಿಪಾಲ.