ಮೈಸೂರು: ಕೊಡಗು ಜಿಲ್ಲೆಯ ವಿರಾಜಪೇಟೆಯ ಮಹೀಂದ್ರ ಕ್ಲಬ್‌ನಲ್ಲಿ ಫೆ.7ರಿಂದ 9ರವರೆಗೆ ರಾಜ್ಯ ಮಟ್ಟದ ಪ್ಲಾಸ್ಟಿಕ್ ಸರ್ಜರಿ ಸಮಾವೇಶ ಆಯೋಜಿಸಲಾಗಿದೆ ಎಂದು ಅಪೋಲೋ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ತಜ್ಞ ಡಾ.ಎಚ್.ವಿ.ಸತೀಶ್ ತಿಳಿಸಿದರು.
ಫೆ.7ರ ಮಧ್ಯಾಹ್ನ 2.30ಕ್ಕೆ ಶಿಬಿರಕ್ಕೆ ಚಾಲನೆ ದೊರೆಯಲಿದ್ದು, ಇದರಲ್ಲಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ತಜ್ಞರು ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಸುಮಾರು 160 ಜನ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಂತರ ಪುನರ್ ನಿರ್ಮಾಣ, ಜನ್ಮ ದೋಷಗಳಿಗೆ ಶಸ್ತ್ರ ಚಿಕಿತ್ಸೆ, ಸಂಕೀರ್ಣ ಅಂಗ ಗಾಯಗಳು, ನರಗಳ ಗಾಯದ ಚಿಕಿತ್ಸೆ, ಮೈಕ್ರೋ ವಾಸ್ಕ್ಯುಲರ್ ಶಸ್ತ್ರಚಿಕಿತ್ಸೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಮಾಹಿತಿ ನೀಡಿದರು.
ತಜ್ಞರಾದ ಡಾ.ಎಸ್.ಚೈತ್ರಾ, ಡಾ.ಅಮನ್ ನಾಯಕ್ ಇದ್ದರು.