ಜು.26ರಿಂದ ಮೂರು ದಿನ ವೈದ್ಯರ ಸಮ್ಮೇಳನ: ಸಂಘಟನಾ ಅಧ್ಯಕ್ಷ ಡಾ.ಕೆ.ಎಂ.ಶಿವಕುಮಾರ್ ಹೇಳಿಕೆ

Three day doctors conference mandya
Published on

ಮಂಡ್ಯ: ನಗರದಲ್ಲಿ ಮೊದಲ ಬಾರಿಗೆ ಜು.26ರಿಂದ ಮೂರು ದಿನಗಳ ಕಾಲ ಕ್ಯಾಪಿಕಾನ್ ಶೀರ್ಷಿಕೆಯಡಿ 41ನೇ ರಾಜ್ಯಮಟ್ಟದ ಫಿಸಿಷಿಯನ್ ವೈದ್ಯರ (ವೈದ್ಯಶಾಸ್ತ್ರ ತಜ್ಞರು) ಸಮ್ಮೇಳನ ಆಯೋಜಿಸ1ಲಾಗಿದೆ ಎಂದು ಸಮ್ಮೇಳನ ಸಮಿತಿ ಸಂಘಟನಾ ಅಧ್ಯಕ್ಷ ಡಾ.ಕೆ.ಎಂ.ಶಿವಕುಮಾರ್ ತಿಳಿಸಿದರು.

ಅಸೋಸಿಯೇಷನ್ ಆಫ್ ಫಿಜಿಷಿಯನ್ ಆಫ್ ಇಂಡಿಯಾ(ಎಪಿಐ) ಮಂಡ್ಯ ಶಾಖೆಯು ಆದಿಚುಂಚನಗಿರಿ ವಿಶ್ವವಿದ್ಯಾಲಯ ಮತ್ತು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಸಹಯೋಗದಲ್ಲಿ ಆಯೋಜಿಸುತ್ತಿರುವ ಸಮ್ಮೇಳನಕ್ಕೆ ರಾಜ್ಯದ ವಿವಿಧೆಡೆಯಿಂದ 1200ಕ್ಕೂ ಹೆಚ್ಚು ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತೆಲಂಗಾಣದ ಖ್ಯಾತ ಫಿಜಿಷಿಯನ್ ಡಾ.ನರಸಿಂಹಲು, ಹೈದರಾಬಾದ್‌ನ ಡಾ.ಪಿ.ಸಿ.ರತ್, ಕೋಲ್ಕತ್ತದಿಂದ ಡಾ.ನಂದಿನಿ ಚಟರ್ಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎ.ಶೇಖರ್ ಸೇರಿದಂತೆ 76 ಜನ ಸಂಪನ್ಮೂಲ ತಜ್ಞ ವೈದ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. 600 ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಂದ 900 ಪ್ರಬಂಧಗಳು ಮಂಡನೆಯಾಗಲಿವೆ ಎಂದರು.

ನುರಿತ ವೈದ್ಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಾಗಿದೆ. ಹೊರಗಿನ ತಜ್ಞ ವೈದ್ಯರು ಮತ್ತು ನಮ್ಮ ಸ್ಥಳೀಯ ವೈದ್ಯರು, ವೈದ್ಯ ವಿದ್ಯಾರ್ಥಿಗಳ ನಡುವೆ ಪರಸ್ಪರ ಸಂಹವನಕ್ಕೆ ಈ ಸಮ್ಮೇಳನ ಸಹಕಾರಿಯಗಿದೆ. ಸಮ್ಮೇಳನಕ್ಕೆ 65ರಿಂದ 70 ಲಕ್ಷ ರೂ. ವೆಚ್ಚವಾಗಲಿದೆ. ವೈದ್ಯರ ಪ್ರವೇಶ ಶುಲ್ಕದ ಮೂಲಕ ಈ ವೆಚ್ಚವನ್ನು ಭರಿಸಲಾಗುತ್ತಿದೆ. ಜತೆಗೆ, ಫಾರ್ಮಾ ಇಂಡಸ್ಟ್ರಿಯ ಔಷಧ ಕಂಪನಿಗಳ ಪ್ರಾಯೋಜಕತ್ವ ನೀಡಿವೆ ಎಂದರು.

ಸಮಿತಿಯ ಖಜಾಂಚಿ ಡಾ.ಉತ್ತಮ್‌ಚಂದ್, ಸಂಘಟನಾ ಕಾರ್ಯದರ್ಶಿ ಡಾ.ಎಂ.ಸಿ.ರೇಖಾ, ಎಪಿಯ ಜಿಲ್ಲಾಲ್ಲಾಧ್ಯಕ್ಷ ಡಾ.ಎ.ಎಂ.ಪ್ರಸನ್ನಕುಮಾರ್, ಉಪಾಧ್ಯಕ್ಷ ಡಾ.ಮೋಹನ್‌ಕುಮಾರ್, ಜಂಟಿ ಕಾರ್ಯದರ್ಶಿ ಡಾ.ರಾಘವೇಂದ್ರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net