ಮೂವರು ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ

dog bite
Published on

ಮುಂಡಗೋಡ: ಮನೆ ಮುಂದೆ ಆಟವಾಡುತ್ತಿದ್ದ ಮೂವರು ಮಕ್ಕಳ ಮೇಲೆ ಹುಚ್ಚು ನಾಯಿಯೊಂದು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ ಘಟನೆ ಪಟ್ಟಣದ ಲಂಬಾಣಿತಾಂಡಾ ಹಾಗೂ ಕಿಲ್ಲೆ ಓಣಿಯಲ್ಲಿ ಭಾನುವಾರ ಜರುಗಿದೆ.

ಕಿಲ್ಲೆ ಓಣಿಯ ಶಾದಾಬ್ ನಿಗೋಣಿ(6), ಲಂಬಾಣಿ ತಾಂಡಾದ ಅನನ್ಯಾ ಲಮಾಣಿ (4) ಹಾಗೂ ಕಿಲ್ಲೆ ಓಣಿಯ ಮತ್ತೊರ್ವ ಬಾಲಕಿ ಮೇಲೆ ದಾಳಿ ನಡೆಸಿದ ಶ್ವಾನ ಎರ್ರಾಬಿರ್ರಿಯಾಗಿ ಕಚ್ಚಿ ಗಾಯಗೊಳಿಸಿದೆ.

ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದ್ದರಿಂದ ಮೂವರು ಮಕ್ಕಳ ಮುಖ, ಕೈ, ಕಾಲಿನ ಭಾಗಕ್ಕೆ ಗಾಯಗಳಾಗಿವೆ. ಇಬ್ಬರಿಗೆ ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net