

ಕೋಲಾರ: ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಮೂವರನ್ನು ಕೋಲಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲದ ಶಶಿಧರ್ (39), ಮಾಲೂರು ತಾಲೂಕಿನ ತೊರಹಳ್ಳಿ ಗ್ರಾಮದ ಹರ್ಷಿತ್ (25) ಹಾಗೂ ಚಾಮರಾಜನಗರದ ಸೂರ್ಯ ಪ್ರಕಾಶ್ (24) ಬಂಧಿತರು.
ಆರೋಪಿಗಳಿಂದ 8 ಲಕ್ಷ ರೂ. ಮೌಲ್ಯದ 95 ಗ್ರಾಂ ಚಿನ್ನ ಗಟ್ಟಿ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಕೋಲಾರದ ಆರ್.ವಿ. ಶಾಲೆ ಮುಂಭಾಗದ ಹೈವೇ ಸರ್ವೀಸ್ ರಸ್ತೆ, ಜಯನಗರದ 5ನೇ ಕ್ರಾಸ್ ಹಾಗೂ ಬಂಗಾರಪೆಟೆ ಪಟ್ಟಣದ 2 ಕಡೆಗಳಲ್ಲಿ ಮಹಿಳೆಯರಿಂದ ಚಿನ್ನದ ಸರಗಳನ್ನು ಕಿತ್ತುಕೊಂಡು ಹೋಗಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಎಸ್ಪಿ ಬಿ.ನಿಖಿಲ್ ಮಾರ್ಗದರ್ಶನದಲ್ಲಿ ಎಎಸ್ಪಿಗಳಾದ ರವಿಶಂಕರ್, ಜಗದೀಶ್, ಡಿವೈಎಸ್ಪಿ ಎಂ.ಎಚ್.ನಾಗ್ತೆ ಮಾರ್ಗದರ್ಶನದಲ್ಲಿ ಕೋಲಾರ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸದಾನಂದ, ಪಿಎಸ್ಐ ಸೈಯದ್ ಖಾಸಿಂ, ಸಿಬ್ಬಂದಿ ವಿ.ಎನ್.ಮೋಹನ್, ಆರ್.ನಾರಾಯಣಸ್ವಾಮಿ, ಎಂ.ಶ್ರೀನಾಥ, ಮೆಹಬೂಬ್ ಪಾಷಾ, ಗಂಗಾಧರ, ಅರ್ಚನಾ, ಚಾಲಕ ಮುರಳಿ, ಟೆಕ್ನಿಕಲ್ ಸಿಬ್ಬಂದಿ ಮುರಳಿ, ಶ್ರೀನಾಥ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.