ಮೂರು ಪ್ರಕರಣದಲ್ಲಿ 20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

This is masked man robber with stolen gold.
This is masked man robber with stolen gold.
Published on

ಬೆಳಗಾವಿ: ನಗರದಲ್ಲಿ ಒಂದೇ ದಿನ ಮೂರು ಪ್ರತ್ಯೇಕ ಕಳ್ಳತನ ಪ್ರಕರಣ ನಡೆದಿದ್ದು, ಅಂದಾಜು 20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳವು ಮಾಡಲಾಗಿದೆ.

ಪಾಂಗೂಳ ಗಲ್ಲಿಯ ನಿತೇಶ ಪ್ರಕಾಶ ಶಿಂಧೆ ಅವರು ಮನೆಯಲ್ಲಿ ಇಲ್ಲದೇ ಇರುವಾಗ ಮನೆಯ ಬೀಗ ಮುರಿದು ಟ್ರೇಜರಿಯ ಲಾಕರ್​ದಲ್ಲಿ ಚಿನ್ನದ ಕಿವಿಯೋಲೆ, ಚೈನ್​ ಸೇರಿ ಒಟ್ಟು 1,80,000 ಮೌಲ್ಯದ 30 ಗ್ರಾಂ ಚಿನ್ನಾಭರಣ ದೋಚಲಾಗಿದೆ. ಈ ಕುರಿತು ಮಾರ್ಕೇಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಶಹಾಪುರದ ಎಮ್​.ಎಪ್​ ರಸ್ತೆಯಲ್ಲಿನ ಕೃಷ್ಣಾ ಅಪಾರ್ಟ್​ಮೆಂಟ್​ದ ಸ್ಮೀತ ನಾಮದೇವ ಪಾಟೀಲ ಎಂಬುವವರ ಮನೆಯ ಬೀಗ ಮುರಿದು ಮನೆಯಲ್ಲಿದ್ದ 6,75,800 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಭಾನುವಾರ ಕಳ್ಳತನ ಮಾಡಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಹಾಪುರದ ಎಮ್​.ಎಪ್​ ರಸ್ತೆಯಲ್ಲಿನ ಕೃಷ್ಣಾ ಬಿಲ್ಡಿಂಗ್​ನಲ್ಲಿ ವಾಸವಿರುದ ಪ್ರಕಾಶ ರಾಮಚಂದ್ರ ದೇಸಾಯಿ ಎಂಬುವವರ ಮನೆಯ ಬಾಗಿಲು ಮುರಿದು 11,34,400 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಲಾಗಿದೆ. ಈ ಕುರಿತು ಶಹಾಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net