ಮರದ ಕೊಂಬೆ ಬಿದ್ದು ಮೂರು ಕಾರು ಜಖಂ

Screenshot_2024-05-05-18-04-24-48_6012fa4d4ddec268fc5c7112cbb265e7
ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ಡಿಂಕದಮ್ಮ ದೇವಸ್ಥಾನದ ಬಳಿ ಕಾರುಗಳ ಮೇಲೆ ಮರದ ಕೊಂಬೆ ಮುರಿದು ಬಿದ್ದು ಕಾರು ಜಖಂಗೊಂಡಿರುವುದು
Published on

ಪಾಂಡವಪುರ: ತಾಲೂಕಿನ ಡಿಂಕಾ ಗ್ರಾಮದಲ್ಲಿ ಕಾರುಗಳ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಮೂರು ಕಾರು ಜಖಂಗೊಂಡಿವೆ.

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಡಿಂಕಾ ಗ್ರಾಮದಲ್ಲಿರುವ ಡಿಂಕದಮ್ಮ ದೇವಿಯ ದರ್ಶನಕ್ಕೆ ಆಗಮಿಸಿದ್ದ ಭಕ್ತರು ದೇವಸ್ಥಾನ ಸಮೀಪದ ಬಸುರಿ ಮರದ ನೆರಳಿನಲ್ಲಿ ಕಾರುಗಳನ್ನು ನಿಲ್ಲಿಸಿ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಗೆದ್ದಲು ಹಿಡಿದು ಟೊಳ್ಳಾಗಿದ್ದ ಮರದ ಭಾರಿ ಗಾತ್ರದ ಕೊಂಬೆ ಮುರಿದು ಕಾರುಗಳ ಮೇಲೆ ಬಿದ್ದಿದೆ. ಈ ವೇಳೆ ಕಾರುಗಳಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಬಳಿಕ ಮರದ ಕೊಂಬೆಗಳನ್ನು ಕತ್ತರಿಸಿ ಕಾರುಗಳನ್ನು ಹೊರ ತರಲಾಯಿತು. ಮೂರೂ ಕಾರುಗಳು ಬಹುತೇಕ ಜಖಂ ಆಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net