ಹುಲಿ ದಾಳಿಯಿಂದ ಮೂರು ಕರುಗಳ ಸಾವು

08bnk5
ಹುಲಿ ದಾಲಿಗೆ ಮರತಪಟ್ಟಿರುವ ಕರು.
Published on

ಬಣಕಲ್: ಬಿ.ಹೊಸಳ್ಳಿ ದುಗ್ಗಿನಮಕ್ಕಿ ಗ್ರಾಮದಲ್ಲಿ ಹುಲಿ ದಾಳಿಗೆ ಬಿ.ಹೊಸಳ್ಳಿ ಗ್ರಾಮದ ಅಶೋಕಗೌಡ ಮತ್ತು ರುದ್ರಪ್ಪಗೌಡ ಎಂಬುವವರ ಮೂರು ಕರುಗಳು ಬಲಿಯಾಗಿವೆ. ಘಟನೆ ನಡೆದ ಸ್ಥಳಕ್ಕೆ ಉಪವಲಯ ಅರಣ್ಯಧಿಕಾರಿ ಉಮೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಭಾರತಿಬೈಲ್, ಬಿ.ಹೊಸಳ್ಳಿ, ಹೊಕ್ಕಳ್ಳಿ, ಹೆಗ್ಗುಡ್ಲು ಭಾಗದಲ್ಲಿ ನೂರಕ್ಕೂ ಅಧಿಕ ದನಗಳು ಹುಲಿ ದಾಳಿಯಿಂದ ಮೃತಪಟ್ಟಿದ್ದರೂ ಅರಣ್ಯಇಲಾಖೆ ಹುಲಿ ಸ್ಥಳಾಂತರಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಭಾಗದ ಕೂಲಿ ಕಾರ್ಮಿಕರು, ಶಾಲಾ ಮಕ್ಕಳು ಹುಲಿ ಆತಂಕದಲ್ಲೇ ಬದುಕುವಂತಾಗಿದೆ. ಕೂಡಲೇ ಹುಲಿಯನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥ ಚಂದನ್ ಗೌಡ ಒತ್ತಾಯಿಸಿದ್ದಾರೆ. ಹುಲಿ ದಾಳಿಗೆ ಬಿ.ಹೊಸಳ್ಳಿ ಭಾಗದ ಮೂರು ಕರುಗಳು ಮೃತಪಟ್ಟಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪರಿಹಾರಕ್ಕಾಗಿ ಸೂಕ್ತ ಕ್ರಮಕ್ಕೆ ಮಾಹಿತಿ ನೀಡಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಉಮೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net