

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ತಂಗಡಿ ಶಾಖೆಯ ಗ್ರಾಹಕರ ಸಂಪರ್ಕ ಕಾರ್ಯಕ್ರಮ ಮತ್ತು ನವೀಕೃತ ಶಾಖೆ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದ ಶಾಖಾ ಕಚೇರಿಯಲ್ಲಿ ಶನಿವಾರ ಉದ್ಘಾಟನೆಗೊಂಡಿತು.
ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, 16 ವಷರ್ಗಳ ಹಿಂದೆ ಪ್ರಾರಂಭವಾದ ಸಂಘ ಮೊದಲ ಮೂರು ವರ್ಷ ಬೆಳ್ತಂಗಡಿಯಲ್ಲಿ ಮಾತ್ರ ಕಚೇರಿ ಇದ್ದು ಬಳಿಕ ಪ್ರಗತಿಯತ್ತ ಮುನ್ನಡೆದು ಪ್ರಸ್ತುತ 22 ಶಾಖೆಗಳೊಂದಿಗೆ ವ್ಯವಹಾರ ನಡೆಸುತ್ತಿದೆ. ಶೀಘ್ರದಲ್ಲಿಯೇ ಇನ್ನು ಮೂರು ಶಾಖೆ ಪ್ರಾರಂಭವಾಗಲಿದೆ ಎಂದರು.
ಸಂಘದ ಉಪಾಧ್ಯಕ್ಷ ಭಗೀರಥ ಜಿ., ನಿರ್ದೇಶಕರಾದ ಸುಜೀತಾ ವಿ.ಬಂಗೇರ, ತನುಜಾ ಶೇಖರ್, ಜಯವಿಕ್ರಮ್ ಕಲ್ಲಾಪು, ದಿವಾಕರ್, ಆನಂದ ಪೂಜಾರಿ, ಜಗದೀಶ್ಚಂದ್ರ ಡಿ.ಕೆ., ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ನಿವೃತ್ತ ಎಸ್‌ಪಿ ಪೀತಾಂಬರ ಹೇರಾಜೆ, ಸಂಘದ ವಿಶೇಷ ಅಧಿಕಾರಿ ಎಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಉಪಸ್ಥಿತರಿದ್ದರು. ಸಂಘದ ಕಾನೂನು ಸಲಹೆಗಾರ ಪ್ರಶಾಂತ್, ಗ್ರಾಹಕರು, ಕೇಂದ್ರ ಕಚೇರಿ ಮತ್ತು ಶಾಖಾ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ನಿರೂಪಿಸಿದರು. ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಪ್ರಶಾಂತ್ ಸ್ವಾಗತಿಸಿ, ಕೇಂದ್ರ ಕಚೇರಿ ವ್ಯವಸ್ಥಾಪಕ ಕೀರ್ತನ್ ವಂದಿಸಿದರು.