ಮೂವರು ಬೈಕ್ ಕಳ್ಳರ ಬಂಧನ

16ravig6-web
ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಮೂವರು ಬೈಕ್ ಕಳ್ಳರನ್ನು ಬಂಧಿಸಿ, 18 ಬೈಕ್ ವಶಪಡಿಸಿಕೊಂಡಿದ್ದಾರೆ. ಗ್ರಾಮೀಣ ಠಾಣೆ ಸಿಪಿಐ ಸುನೀಲಕುಮಾರ ನಂದೇಶ್ವರ, ಪಿಎಸ್‌ಐ ಆನಂದ ಅದಗೊಂಡ, ಪೇದೆಗಳಾದ ವೈ.ವೈ.ತಳೇವಾಡ, ಎಂ.ಎಸ್. ಗಾಡವಿ, ಸಿ.ಎಂ. ಹುಣಶ್ಯಾಳ ಹಾಗೂ ಎನ್.ಎಂ.ಚಿಕ್ಕಲಕಟ್ಟಿ ಇತರರು ಇದ್ದರು.
Published on

ಬೆಳಗಾವಿ: ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಗುರುವಾರ ಬಂಧಿಸಿರುವ ಪೊಲೀಸರು 18 ಬೈಕ್ ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಅಕ್ಷಯ ಶಂಕರ ಚೌಗಲೆ (22), ಬಸವನ ಕುಡಚಿಯ ಮಹೇಶ ಭಾವುಕಣ್ಣಾ ಅನಗೋಳಕರ (19) ಹಾಗೂ ಆಕಾಶ ಭಾವುಕಣ್ಣಾ ಅನಗೋಳಕರ (21) ಬಂಧಿತ ಆರೋಪಿಗಳು. ತಾಲೂಕಿನ ಮಚ್ಛೆ-ವಾಘವಾಡೆ ಕ್ರಾಸ್ ಬಳಿ ಆರೋಪಿಗಳು ಸಂಶಯಾಸ್ಪದ ತಿರುಗಾಡುವಾಗ ಸಿಕ್ಕಿಬಿದ್ದಿದ್ದಾರೆ. ನಂತರ ಠಾಣೆಗೆ ಕರೆತಂದು ವಿಚಾರಿಸಿದಾಗ ನಗರ ಸೇರಿ ತಾಲೂಕಿನ ಹಲವೆಡೆ ವಾಹನ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಬಂಧಿತರಿಂದ 6.50 ಲಕ್ಷ ರೂ.ಮೌಲ್ಯದ 18 ಬೈಕ್ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಗ್ರಾಮೀಣ ಠಾಣೆ ಸಿಪಿಐ ಸುನೀಲಕುಮಾರ ನಂದೇಶ್ವರ, ಪಿಎಸ್‌ಐ ಆನಂದ ಅದಗೊಂಡ, ಪೇದೆಗಳಾದ ವೈ.ವೈ.ತಳೇವಾಡ, ಎಂ.ಎಸ್.ಗಾಡವಿ, ಸಿ.ಎಂ.ಹುಣಶ್ಯಾಳ, ಎನ್.ಎಂ. ಚಿಕ್ಕಲಕಟ್ಟಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net