

ಭಟ್ಕಳ: ಕೇರಳ ಕಡೆಯಿಂದ ಭಟ್ಕಳದ ಕಡೆಗೆ ಶನಿವಾರ ಅಕ್ರಮ ಹಾಗೂ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ವಾಹನ ಸಮೇತ ಭಟ್ಕಳ ಶಹರ ಪೊಲೀಸರು ವಶಕ್ಕೆ ಪಡೆದು, ಅಂದಾಜು 10 ಲಕ್ಷ ರೂ. ಮೌಲ್ಯದ ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆ ನರಸಿಂಹಪುರದ ದೊಡ್ಡ ಮಸೀದ ನಿವಾಸಿ ಇಲಿಯಾಜ್ ಪಾಷಾ, ಎನ್ಎಚ್ ಪುರ ಗರಡಿಬಿಡಿ ನಿವಾಸಿ ಸಯ್ಯದ್ ಅಸ್ಪಾಕ್ ಹುಸೇನ್ ಹಾಗೂ ಇನ್ನೋರ್ವ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವರು ಕೇರಳ ಕಡೆಯಿಂದ ಭಟ್ಕಳದ ಕಡೆಗೆ 4 ಕೋಣ ಹಾಗೂ 11 ಎತ್ತುಗಳನ್ನು ಹತ್ಯೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದರು. 11 ಎತ್ತುಗಳ ಪೈಕಿ ಒಂದು ಎತ್ತು ವಾಹನದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.