ಕಡಲೆ ಚೀಲ ಕದ್ದಿದ್ದ ಮೂವರ ಬಂಧನ

WhatsApp Image 2025-02-27 at 9.07.18 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಬೆಳಗಾವಿ ರಸ್ತೆಯ ಪೆಪ್ಸಿ ಫ್ಯಾಕ್ಟರಿ ಬಳಿಯ ಕರ್ನಾಟಕ ಬೀಜ ನಿಗಮದಲ್ಲಿ ಕಡಲೆ ಚೀಲ ಕಳ್ಳತನ ಪ್ರಕರಣವನ್ನು ಉಪನಗರ ಠಾಣೆ ಪೊಲೀಸರು ಎರಡೇ ದಿನಗಳಲ್ಲಿ ಭೇದಿಸಿದ್ದಾರೆ. ಫೆ. 25ರಂದು ನಿಗಮದಲ್ಲಿ ಸಂಗ್ರಹಿಸಿಟ್ಟಿದ್ದ 12 ಚೀಲ ಕಡಲೆ ಚೀಲಗಳ ಕಳ್ಳತನವಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು, ಅರುಣ ಮಾಡಮಗೇರಿ, ಪ್ರಕಾಶ ಹುಬ್ಬಳ್ಳಿ ಹಾಗೂ ಮಂಜುನಾಥ ಜಮುನಾಳ ಎಂಬುವರನ್ನು ಬಂಽಸಿದ್ದಾರೆ. ಕಳ್ಳತನವಾಗಿದ್ದ 12 ಕಡಲೆ ಚೀಲ ಹಾಗೂ ಆರೋಪಿಗಳಿಂದ 2 ಬೈಕ್ ಜಪ್ತಿ ಮಾಡಿದ್ದಾರೆ.

ಎಸಿಪಿ ಪ್ರಶಾಂಶ ಸಿದ್ದನಗೌಡರ ಮಾರ್ಗದರ್ಶನಲ್ಲಿ ಇನ್‌ಸ್ಪೆಕ್ಟರ್ ದಯಾನಂದ ಶೇಗುಣಸಿ, ಪಿಎಸ್‌ಐಗಳಾದ ಎಲ್.ಕೆ. ಕೋಳಬಾಳ, ರುದ್ರಪ್ಪ, ವಿ.ಐ. ಬಳ್ಳಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net