ಜೂಜಾಟದಲ್ಲಿ ತೊಡಗಿದ್ದ ಮೂವರ ಬಂಧನ

19-KGL-4,,,,
Published on

ಕೊಳ್ಳೇಗಾಲ: ತಾಲೂಕಿನ ಸರಗೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ಅಪರಾಧ ಪತ್ತೆ ದಳ ಪೊಲೀಸರು ಬುಧವಾರ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಪಣಕ್ಕಿಟ್ಟಿದ್ದ 26,200 ರೂ. ಹಾಗೂ 9 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ಕೊಳ್ಳೇಗಾಲ ಮೊಳೆಯ ನಿವಾಸಿ ಲೊಕೇಶ್ (38), ಹೊಂಡರಬಾಳು ಗ್ರಾಮದ ಮಹೇಶ್ ರಾಜ್ ಅರಸ್ (50), ಸರಗೂರು ಗ್ರಾಮದ ಚಿಕ್ಕಮಾದಯ್ಯ (52) ಬಂಧಿತರು. ದಾಳಿರಂಗಸ್ವಾಮಿ, ಗುಂಡು, ನಾಗ, ಮಣಿ, ಪಾಂಡುರಂಗ ತಪ್ಪಿಸಿಕೊಂಡಿದ್ದಾರೆ.

ಸರಗೂರು ಗ್ರಾಮದ ಮಾದಯ್ಯ ಅವರ ಜಮೀನಿನ ಬಂಡಿ ದಾರಿಯ ಸಾರ್ವಜನಿಕ ಸ್ಥಳದಲ್ಲಿ ಸಂಜೆ 7 ಗಂಟೆ ವೇಳೆ ಬೈಕ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ ಇಸ್ಪೀಟ್ ಆಡುತ್ತಿರುವ ಬಗ್ಗೆ ಡಿವೈಎಸ್ಪಿ ಎಂ.ಧರ್ಮೇಂದ್ರ ಅವರಿಗೆ ಮಾಹಿತಿ ದೊರೆತಿದೆ. ಬಳಿಕ ಅಪರಾಧ ಪತ್ತೆ ದಳದ ಸಿಬ್ಬಂದಿ ದಾಳಿ ನಡೆಸಿ ಮೂವರನ್ನು ಬಂಧಿಸಿದರು. ದಾಳಿ ವೇಳೆ ತಪ್ಪಿಸಿಕೊಂಡವರ ಪತ್ತೆಗೆ ಪ್ರಕರಣ ದಾಖಲಿಸಿಕೊಂಡ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾಳಿಯಲ್ಲಿ ಪತ್ತೆ ದಳದ ಎಎಸ್‌ಐ ತಕಿವುಲ್ಲಾ, ಎಚ್.ಸಿ.ರವಿಕುಮಾರ್, ವೆಂಕಟೇಶ್, ಕಾನ್‌ಸ್ಟೆಬಲ್ ಬಿಳಿಗೌಡ, ಮಾರ್ಷಲ್, ಬಸವರಾಜು, ಶಾಂತರಾಜು, ರಾಜಪ್ಪ, ದಿನೇಶ್, ದುಂಡಪ್ಪ ಪುಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net