ಜಿಂಕೆ ಮಾಂಸದ ಅಡುಗೆ ಮಾಡುತ್ತಿದ್ದ ಮೂವರ ಬಂಧನ

umblebail forest office
ಉಂಬ್ಳೆಬೈಲು ಗೇಟ್ ಸಮೀಪ ಜಿಂಕೆ ಮಾಂಸದ ಅಡುಗೆ ಮಾಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದರು.
Published on

ಶಿವಮೊಗ್ಗ: ತಾಲೂಕಿನ ಉಂಬ್ಳೆಬೈಲ್ ಗೇಟ್ ಸಮೀಪ ಜಿಂಕೆ ಮಾಂಸದ ಅಡುಗೆ ಮಾಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಉಂಬ್ಳೆಬೈಲ್ ಗ್ರಾಮದ ಹನುಮಂತಪ್ಪ, ಆಂಜನಪ್ಪ, ರಾಮ ಬಂಧಿತರು.

ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶಿವಮೊಗ್ಗ ಅರಣ್ಯಾಧಿಕಾರಿಗಳು ಜಿಂಕೆ ಮಾಂಸ, ಅಡುಗೆಗೆ ಬಳಸಿದ್ದ ಪಾತ್ರೆಗಳು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಭದ್ರಾವತಿ ಡಿಸಿಎಫ್ ಆಶಿಶ್ ರೆಡ್ಡಿ, ಎಸಿಎಫ್ ರತ್ನಪ್ರಭ ಮಾರ್ಗದರ್ಶನದಲ್ಲಿ
ಉಂಬ್ಳೆಬೈಲು ವಲಯ ಆರ್‌ಎಫ್‌ಒ ಎಸ್.ಎಂ.ಶಿವರಾತ್ರೇಶ್ವರ ಸ್ವಾಮಿ, ಡಿಆರ್‌ಎಫ್‌ಒಗಳಾದ ಪವನ್ ಮಹೇಂದ್ರಕರ್, ಗಿಡ್ಡಸ್ವಾಮಿ, ಗಸ್ತು ವನಪಾಲಕರಾದ ಸುನೀಲ್ ಸಾಸಲವಾಡ, ಮಾಲತೇಶ ಸೂರ್ಯವಂಶಿ, ಶ್ರೀಕಾಂತ್, ದಿನೇಶ್, ಸುಧೀರ್, ಲಕ್ಷ್ಮಣ, ರಿಯಾಜ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net