ಗಲಾಟೆ ಮಾಡಿದ್ದ ಮೂವರ ಬಂಧನ

crime
Published on

ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದಲ್ಲಿ ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಗುಡ್‌ಶೆಡ್ ರಸ್ತೆಯ ಅಶ್ರಫ್‌ಖಾನ್ ಬಾಗಲಕೋಟೆ, ರಸೂಲ್‌ಖಾನ್ ಬಾಗಲಕೋಟೆ, ಗಣೇಶಪೇಟೆಯ ಅಸ್ಲಂ ಬೇಪಾರಿಯನ್ನು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ನಿಲ್ಲಿಸಿದ್ದ ಆಟೋರಿಕ್ಷಾ ತೆಗೆಯುವಂತೆ ಹೇಳಿದ್ದನ್ನೇ ನೆಪವಾಗಿಸಿಕೊಂಡು ಗುಂಪೊಂದು ಮಂಗಳವಾರ ಅಂಗಡಿಗೆ ನುಗ್ಗಿ ಅಂಗಡಿಕಾರರಾದ ಅಭಿಷೇಕ, ಮಂಜುನಾಥ ಎಂಬುವವರ ಮೇಲೆ ಹಲ್ಲೆ ಮಾಡಿದ್ದರು. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net