

ಹುಬ್ಬಳ್ಳಿ: ಹಳೇ ದ್ವೇಷವಿಟ್ಟುಕೊಂಡು ವ್ಯಕ್ತಿಯೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಲೆಗೆ ಯತ್ನಿಸಿದ್ದ ಖದೀಮರನ್ನು ಬಂಧಿಸುವಲ್ಲಿ ಇಲ್ಲಿಯ ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪರಶುರಾಮ ಉಪ್ಪಾರ, ಮಹದೇವ ಇರಗಣ್ಣವರ, ಕುಮಾರ ಬಡಿಗೇರ ಬಂಧಿತರು. ಶುಕ್ರವಾರ ರಾತ್ರಿ ಗಬ್ಬೂರಿನ ನಡುರಸ್ತೆಯಲ್ಲಿ ಮನೋಹರ ಚಾಕಲಬ್ಬಿ ಎಂಬಾತನಿಗೆ ಖಾರದಪುಡಿ ಎರಚಿ ಕೊಲೆಗೆ ಯತ್ನಿಸಲಾಗಿತ್ತು. ಗಾಯಗೊಂಡಿದ್ದ ಮನೋಹರನನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಿಕ ಹಾಗೂ ಪಿಎಸ್‌ಐ ರವಿ ವಡ್ಡರ ತಂಡ ಖದೀಮರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.