ಮೂವರ ಬಂಧನ, 55 ಗ್ರಾಂ ಚಿನ್ನಾಭರಣ ವಶಕ್ಕೆ

Screenshot_2024-11-24-19-29-02-76.jpg
Published on

ಬೆಳಗಾವಿ: ಚಿನ್ನಾಭರಣ ಕಳ್ಳತನ ಮಾಡಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಬೇಧಿಸುವಲ್ಲಿ ಯಮಕನಮರಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣದಲ್ಲಿ ದಾದಬಾನಟ್ಟಿಯ ಲಕ್ಷ್ಮೀಕಾಂತ ಕೃಷ್ಣಪ್ಪ ಬೇಡರಟ್ಟಿ, ಉಳ್ಳಾಗಡ್ಡಿ ಖಾನಾಪುರ ಮೂಲದ, ಸದ್ಯ ದಾದಬಾನಟ್ಟಿಯ ಈರಪ್ಪ ರವಿ ನಾಯಿಕ ಮತ್ತು ದಾದಬಾನಟ್ಟಿ ಮೂಲದ ಸಂಜಯ ಸುರೇಶ ಗಡದಕ್ಕಿ ಎಂಬುವರನ್ನು ಪೊಲೀಸರು ಬಂಧಿಸಿ, 55 ಗ್ರಾಮ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಠಾಣೆ ವ್ಯಾಪ್ತಿಯ ಇಸ್ಲಾಂಪುರದ ಅಡಿವೆಪ್ಪ ಲಗಮಪ್ಪ ಬಾಗರಾಯಿ ಅವರ 30 ಗ್ರಾಂ ಚಿನ್ನ ಹಾಗೂ ಯಮಕನಮರಡಿಯ ಸವಿತಾ ಬಸವರಾಜ ನಗಾರಿ ಎಂಬುವವರ 25 ಗ್ರಾಂ ಚಿನ್ನಾಭರಣಗಳನ್ನು ಖದೀಮರು ದೋಚಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net