

ರಾಯಚೂರು ಏಮ್ಸ್ ಹೋರಾಟಗಾರರಿಗೆ ನಗರ ಶಾಸಕ ಡಾ. ಶಿವರಾಜ ಪಾಟೀಲ್ ಗುಂಡಗಿರಿ ಮಾತುಗಳನ್ನು ಆಡಿ ಹೋರಾಟವನ್ನು ಹತ್ತಿಕ್ಕುವ ಕೃತ್ಯಕ್ಕೆ ಇಳಿದಿರುವುದನ್ನು ಖಂಡನೀಯವಾಗಿದೆಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಬಸವರಾಜ ಬಂಡಾರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಆರೋಗ್ಯ ಸಚಿವ ಪ್ರಹ್ಲಾದ್ ಜೋಶಿ ರಾಯಚೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರೀಯ ಸಂಸ್ಥೆಗಳ ಸ್ಥಾಪನೆಯಲ್ಲಿ ತಜ್ಞರ ವರದಿ ಆಧರಿಸಿ ಏಮ್ಸ್ ಸ್ಥಾಪನೆ ಮಾಡಲಾಗುವುದೆಂದು ಹೇಳಿದ್ದು, ರಾಯಚೂರು ಜಿಲ್ಲೆಗೆ ಏಮ್ಸ್ ತಪ್ಪಿಸುವ ಕುತಂತ್ರವಾಗಿದೆ.
ಕಳೆದ ಬಾರಿ ನಂಜುಂಡಪ್ಪ ವರದಿಯನ್ನು ಮೀರಿ ಐಐಟಿ ಧಾರವಾಡಕ್ಕೆ ಸ್ಥಳಾಂತರಿಸುವಾಗ ಯಾವ ತಜ್ಞರ ವರದಿ ಇತ್ತು ಎಂದು ಉತ್ತರಿಸಬೇಕು. ಏಮ್ಸ್ ಹೋರಾಟಗಾರರ ಮೇಲೆ ಹಾಕಿರುವ ಕೇಸ್‌ಗಳನ್ನು ಕೂಡಲೇ ಹಿಂಪಡೆಯಬೇಕು. ಏಮ್ಸ್ ಹೋರಾಟ 3 ವರ್ಷಗಳಿಂದ ನಡೆಯುತ್ತಿದೆ. ಸರ್ಕಾರಿ ಜಾಗದಲ್ಲಿ ಇಷ್ಟು ದಿನ ನಡೆಸುವುದಕ್ಕೆ ಪರವಾನಿಗೆ ಏಕೆ ಕೊಟ್ರಿ. ಆದಷ್ಟು ಬೇಗ ಏಮ್ಸ್ ಟೆಂಟನ್ನು ಕಿತ್ತುಗೆಯಬೇಕೆಂದು ನಗರ ಶಾಸಕರು ಜಿಲ್ಲಾಧಿಕಾರಿಗೆ ಒತ್ತಾಯ ಮಾಡಿದ್ದಾರೆ.
ಹೋರಾಟಗಳು ಸರ್ಕಾರಿ ಸ್ಥಳಗಳಲ್ಲಿ ನಡೆಯುತ್ತವೆ ಹೊರತು ಖಾಸಗಿ ಸ್ಥಳಗಳಲ್ಲಿ ನಡೆಯಲು ಸಾಧ್ಯವಿಲ್ಲ. ಏಮ್ಸ್ ಹೋರಾಟ 3 ವರ್ಷಗಳಿಂದ ಸುದೀರ್ಘವಾಗಿ ನಡೆಯುತ್ತಿದೆ.ನಗರ ಶಾಸಕ ಡಾ. ಶಿವರಾಜ್ ಪಾಟೀಲ್‌ರು ತಮ್ಮ ಪಕ್ಷದ ನಿಯೋಗ ದೆಹಲಿಗೆ ತೆರಳಿ ರಾಯಚೂರಿಗೆ ಏಮ್ಸ್ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಿತ್ತು ಆದರೆ ಮಾಡಿಲ್ಲ. ಆದರಿಂದ ಏಮ್ಸ್ ಹೋರಾಟಕ್ಕೆ ನಮ್ಮ ಪಕ್ಷ ಬೆಂಬಲಿಸುತ್ತಿದೆ ಮುಂದೆಯು ಏಮ್ಸ್ ಹೋರಾಟ ಹೋರಾಟಗಾರರ ಪರವಾಗಿ ನಿಲ್ಲುತ್ತದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜೈ. ಭೀಮ್, ಬಡ್ಡಪ್ಪ, ಓವನ್, ಹನುಮಂತು, ಜಯಪ್ಪ ಇದ್ದರು.