ಆಶ್ಲೀಲವಾಗಿ ಎಡಿಟ್ ಮಾಡಿದ ಫೋಟೋ ಕಳುಹಿಸಿ ಬೆದರಿಕೆ

cyber crime
Published on

ಹುಬ್ಬಳ್ಳಿ: ನಗರದ ವ್ಯಕ್ತಿಯೊಬ್ಬರ ಫೋಟೋವನ್ನು ಆಶ್ಲೀಲವಾಗಿ ಎಡಿಟ್ ಮಾಡಿ ವಾಟ್ಸ್​ಆಪ್​ಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ.

ಖಾಸಗಿ ಉದ್ಯೋಗಿ ಅಜೇಯ್ ಎಂಬುವರಿಗೆ ಬೆದರಿಕೆ ಹಾಕಲಾಗಿದೆ. ಮೊದಲು 5 ಸಾವಿರ ರೂ. ಕಳುಹಿಸಲು ಬೆದರಿಕೆ ಹಾಕಿದ್ದಾರೆ. ಹಣ ಕೊಡದೆ ಇದ್ದಾಗ ವಾಟ್ಸ್​ಆಪ್​ಗೆ ಅಶ್ಲೀಲ ಫೋಟೋ ಕಳುಹಿಸಿ ಬೆದರಿಸಿದ್ದಾರೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net