ಅನಗತ್ಯ ಕರೆಗಳ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಿ

dj nyk cyber
Published on

ನಾಯಕನಹಟ್ಟಿ: ಬೆದರಿಕೆ ಒಡ್ಡುವಂತಹ ಅನಗತ್ಯ ದೂರವಾಣಿ ಕರೆಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಪಿಎಸ್​ಐ ದೇವರಾಜ್ ಹೇಳಿದರು.

ಪಟ್ಟಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸೈಬರ್ ಅಪರಾಧಗಳ ತಡೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯ ಮೂಲಕ ನಡೆಯುವ ದೂರವಾಣಿ ಸಂಭಾಷಣೆಗಳ ಬಗ್ಗೆ ಎಚ್ಚರಿಕೆ ಅಗತ್ಯ. ಇಂತಹ ಫೋನ್ ಸಂಖ್ಯೆಗಳ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಡಿಜಿಟಲ್ ಅರೆಸ್ಟ್ ಎನ್ನಲಾಗುವ ಇಂತಹ ಬೆದರಿಕೆ ದೂರವಾಣಿ ಕರೆಗಳಿಂದ ಕೋಟಿಗಟ್ಟಲೆ ಹಣವನ್ನು ವಂಚಕರು ಈಗಾಗಲೇ ಲೂಟಿ ಮಾಡಿದ್ದಾರೆ. ಸಾರ್ವಜನಿಕರು ಇಂತಹ ಕರೆಗಳ ಬಗ್ಗೆ ತಾಳ್ಮೆ ಕಳೆದುಕೊಳ್ಳದೆ ಶಾಂತಿಯಿಂದ ವರ್ತಿಸಬೇಕು. ಅಂತಹಹ ಜನರಿಗೆ ಯಾವುದೇ ಮಾಹಿತಿಯನ್ನು ನೀಡಬಾರದು ಎಂದು ತಿಳಿಸಿದರು.

ದೂರವಾಣಿ ಬಳಸಿಕೊಂಡು ಆರ್ಥಿಕ ಅಪರಾಧಗಳನ್ನು ಮಾಡುವವರ ಪ್ರಮಾಣ ಹೆಚ್ಚಾಗಿದೆ. ಇದರ ಬಗ್ಗೆ ಪತ್ರಿಕೆ ಮತ್ತು ಮಾಧ್ಯಮಗಳ ಮೂಲಕ ಸಾಕಷ್ಟು ಎಚ್ಚರಿಕೆ ಮತ್ತು ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.

ಹಣಕಾಸಿನ ವ್ಯವಹಾರಗಳು ಮೊಬೈಲ್ ಆಧಾರಿತವಾಗುತ್ತಿವೆ. ಹೀಗಾಗಿ ಮೊಬೈಲ್ ಬಳಸಿಕೊಂಡು ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿವೆ. ಇವುಗಳು ಸಾಮಾನ್ಯವಾಗಿ ಹಿಂದಿ ಮತ್ತು ಇಂಗ್ಲೀಷ್​ನಲ್ಲಿ ಹೆಚ್ಚಾಗಿವೆ. ದೂರವಾಣಿ ಮೂಲಕ ಕರೆ ಮಾಡಿ ನಿಮ್ಮ ಆಧಾರ ಸಂಖ್ಯೆ ಮತ್ತು ಬ್ಯಾಂಕ್ ಸಂಖ್ಯೆಯಿಂದ ಆರ್ಥಿಕ ಅಪರಾಧವಾಗಿದೆ ಎಂದು ನಂಬಿಸುತ್ತಾರೆ. ನಂತರ ನಿಮ್ಮ ಬ್ಯಾಂಕ್ ಖಾತೆಗಳ ಬಗ್ಗೆ ಸೂಕ್ಷ್ಮವಾಗಿ ಮಾಹಿತಿ ಕಲೆ ಹಾಕಿ ಖಾತೆಯಲ್ಲಿರುವ ಹಣವನ್ನು ಲಪಟಾಯಿಸುತ್ತಾರೆ.

ಸಿಪಿಐ ಹನುಮಂತ ಸಿರೇಹಳ್ಳಿ, ಪಿಎಸ್​ಐ ಕೆ.ಶಿವಕುಮಾರ್ ಹಾಗೂ ಠಾಣಾ ಸಿಬ್ಬಂದಿಗಳಿದ್ದರು. ಶಾಲಾ ವಿದ್ಯಾರ್ಥಿಗಳು ಅಂಬೇಡ್ಕರ್ ವೃತ್ತದಿಂದ ಹೊರಮಠದ ಆವರಣದವರೆಗೆ ಜಾಥಾ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net