

ಹುಬ್ಬಳ್ಳಿ: ಸಾಲವಾಗಿ ಪಡೆದ 8 ಲಕ್ಷ ರೂ.ಗೆ 4 ಲಕ್ಷ ರೂ. ಬಡ್ಡಿ ಕಟ್ಟಿದರೂ ಅಸಲು ಮತ್ತು ಬಡ್ಡಿ ನೆಪದಲ್ಲಿ 28.08 ಲಕ್ಷ ರೂ. ಕೊಡಬೇಕೆಂದು ಜೀವ ಬೆದರಿಕೆ, ಕಿಡ್ನಾೃಪ್ ಮಾಡುವುದಾಗಿ ಹೆದರಿಸಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಸ್ತಾಕ ಅಹ್ಮದ್ ಎಸ್. ಎಂಬುವವರು ಅಯಾಜುದ್ದೀನ್ ಎಂ. ಎಂಬಾತನ ಹತ್ತಿರ 8.56 ಲಕ್ಷ ರೂ. ಸಾಲ ಪಡೆದಿದ್ದರು. ಅದಕ್ಕೆ 4 ಲಕ್ಷ ರೂ. ಬಡ್ಡಿ ತುಂಬಿದ್ದರು. ಆದರೂ ಇನ್ನೂ ಅಸಲು ಮತ್ತು ಬಡ್ಡಿ ಸೇರಿ 28.08 ಲಕ್ಷ ರೂ. ಕೊಡಲು ಅಯಾಜುದ್ದೀನ್ ಒತ್ತಾಯಿಸಿದ್ದ. ಅಲ್ಲದೇ ನನ್ನ ಪತ್ನಿಗೆ ಜೀವ ಬೆದರಿಕೆ, ಇಬ್ಬರು ಮಕ್ಕಳನ್ನು ಕಿಡ್ನಾೃಪ್ ಮಾಡುವುದಾಗಿ ಧಮಕಿ ಹಾಕಿದ್ದ ಎಂದು ಮಸ್ತಾಕ್ ಅಹ್ಮದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.