ಖಾಲಿ ಹುದ್ದೆಗಳ ಭರ್ತಿ, ವಯೋಮಿತಿ ಹೆಚ್ಚಳಕ್ಕೆ ಒತ್ತಾಯ; ಸಾವಿರಾರು ಉದ್ಯೋಗಾಕಾಂಕ್ಷಿಗಳಿ೦ದ ಬೃಹತ್ ಪ್ರತಿಭಟನೆ

25 Dwd 5B
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಖಾಲಿ ಹುದ್ದೆಗಳ ಭರ್ತಿ, ನೇಮಕಾತಿಯ ವಯೋಮಿತಿ ಹೆಚ್ಚಳ ಮತ್ತು ಕೆಎಎಸ್ ಅಽಸೂಚನೆಯಲ್ಲಿ ಕಂಡುಬ0ದಿರುವ ಕನ್ನಡ ಅನುವಾದದ ತಪ್ಪುಗಳನ್ನು ಪರಿಶೀಲಿಸಿ ಅಧಿಸೂಚನೆ ರದ್ದುಪಡಿಸಲು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿನ ಶ್ರೀಗರದಿಂದ ಕೆಸಿಡಿ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಜ್ಯುಬಿಲಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 4- 5 ವರ್ಷಗಳಿಂದ ಪಿಸಿ, ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿದೆ. 7- 8 ವರ್ಷಗಳಿಂದ ಎಸ್‌ಡಿಎ, ಎ-ï‌ಡಿಎ ಹುದ್ದೆಗಳ ನೇಮಕಾತಿ ನಡೆದಿಲ್ಲ. ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿಯಾಗಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳು ತೊಂದರೆ ಅನುಭವಿಸುತ್ತಿವೆ. ಅನೇಕ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿಯಾಗದ ಕಾರಣ ಸಾವಿರಾರು ವಿದ್ಯಾರ್ಥಿಗಳ ವಯೋಮಿತಿ ಮೀರಿದೆ. ಕೂಡಲೇ ವಯೋಮಿತಿಯನ್ನು ಕನಿಷ್ಠ 5 ವರ್ಷ ಸಡಿಲಿಕೆ ಮಾಡಿ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ರವಾನಿಸಿದರು.

ಪ್ರತಿಭಟನಾಕಾರರು ಜಿಲ್ಲಾಽಕಾರಿ ಕಚೇರಿಗೆ ತೆರಳಲು ಯೋಜಿಸಿದ್ದರು. ಆದರೆ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರೇ ಜ್ಯುಬಿಲಿ ವೃತ್ತಕ್ಕೆ ತೆರಳಿ ಮನವಿ ಸ್ವೀಕರಿಸಿದರು.

* ಕೆಲ ಕಿಡಿಗೇಡಿಗಳಿಂದ ಅನುಚಿತ ವರ್ತನೆ:

ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಅನುಚಿತವಾಗಿ ವರ್ತಿಸಿದರು. ಘಟನೆಗಳೂ ದಾಖಲಾದವು. ಶ್ರೀನಗರದಿಂದ ಜ್ಯುಬಿಲಿ ವೃತ್ತದವರೆಗೆ ವಾಹನ ಸವಾರರೊಂದಿಗೆ ಚಕಮಕಿ ನಡೆಸಿದರು. ಅಲ್ಲಲ್ಲಿ ಹಾಕಲಾಗಿದ್ದ ರಾಜಕಾರಣಿಗಳ ಮತ್ತು ವಿವಿಧ ಸಂಘ- ಸಂಸ್ಥೆಗಳ ಬ್ಯಾನರ್‌ಗಳನ್ನು ಹರಿದು ಕಾಲಲ್ಲಿ ತುಳಿದರು. ಸಚಿವರು, ಶಾಸಕರು ಅವರ ಅಭಿಮಾನಿಗಳು ಹಾಕಿದ್ದ ಬ್ಯಾನರ್‌ಗಳಿಗೆ ಚಪ್ಪಲಿ ಜೋತು ಬಿಟ್ಟು ದಾಷ್ಟ÷್ರ್ಯ ಮೆರೆದರು. ಸಾವಿರಾರು ಉದ್ಯೋಗಾಕಾಂಕ್ಷಿಗಳು ಜಮಾವಣೆಗೊಂಡಿದ್ದರಿ0ದ ಸ್ಥಳಕ್ಕೆ ಬಂದಿದ್ದ ಹು- ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರ ಎದುರೇ ಈ ಎಲ್ಲ ಅನುಚಿತ ವರ್ತನೆ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net