ಬನಶಂಕರಿದೇವಿ ಜಾತ್ರೆಗೆ ಇಳಕಲ್ಲದಿಂದ ಸಾವಿರಾರು ಭಕ್ತರು ಪಾದಯಾತ್ರೆ

Thousands of devotees walk from Ilakalla to Banashankaridevi Jatra
ಬನಶಂಕರಿ ಜಾತ್ರೆ ಗೆ ಇಲಕಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಪಾದಯಾತ್ರೆ ಹೊರಟ ಅಮ್ಮನ ಭಕ್ತರು.
Published on

ಇಳಕಲ್ಲ: ಲಕ್ಷಾಂತರ ಭಕ್ತರ ಸಮೂಹದಲ್ಲಿ ಉತ್ತರ ಕರ್ನಾಟಕದ ಬಾದಾಮಿ ಬನಶಂಕರಿದೇವಿ ಜಾತ್ರೆಗೆ ಇಳಕಲ್ಲದಿಂದ ಸಾವಿರಾರು ಭಕ್ತರು ಮಂಗಳವಾರ ಬೆಳಗಿನ ಜಾವ ಪಾದಯಾತ್ರೆ ಪ್ರಾರಂಭಿಸಿದರು.

ಪಾದಯಾತ್ರೆಯಲ್ಲಿ ವದ್ಧರು, ಪುರುಷರು, ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು ಸೇರಿದಂತೆ ವಿಷೇಶ ಚೇತನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು, ಅದರಲ್ಲೂ ಯುವ ಪೀಳಿಗೆ ಸಂಖ್ಯೆಯೇ ಹೆಚ್ಚಾಗಿರುವದು ವಿಷೇಶವಾಗಿತ್ತು. ಪ್ರತಿ ವರ್ಷ ಸುಮಾರು 10 ಸಾವಿರಕ್ಕಿಂತ ಹೆಚ್ಚು ಜನ ನಗರದಿಂದ ಪಾದಯಾತ್ರೆ ಮೂಲಕ ಬನಶಂಕರಿದೇವಿಯ ಜಾತ್ರೆಗೆ ತೆರಳುತ್ತಿದ್ದಾರೆ.

ನಗರದ ಉದಯೋನ್ಮುಖ ಚಿಟ್‌ಪಂಡ್, ಬ್ಲೂ ಸರ್ಕಲ್ ಗ್ರ್ೂ ಯುವಕರ ತಂಡ ಹಾಗೂ ಮಾರವಾಡಿ ಸಮಾಜದವರು ಪಾದಯಾತ್ರಿಗಳಿಗೆ ವಿವಿಧ ವ್ಯವಸ್ಥೆ ಮಾಡಿದರು. ಪಾಟೀಲ ಅರ್ಥೋ ಮತ್ತು ಟ್ರಾಮಾ ಸೆಂಟರ್ ಆಸ್ಪತ್ರೆ ಹಾಗೂ ಶಾವಿ ಸಂಜೀವಿನಿ ಆಸ್ಪತ್ರೆ ವತಿಯಿಂದ ಪಾದಾಚಾರಿಗಳಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net