ಬ್ರಹ್ಮ ರಥವೇರಿದ ಕುಂದೂರು ಆಂಜನೇಯ

hnl
Published on

ಹೊನ್ನಾಳಿ: ಮಧ್ಯಕರ್ನಾಟಕದಲ್ಲಿ ಸಹಸ್ರಾರು ಭಕ್ತರನ್ನು ಹೊಂದಿರುವ ಹೊನ್ನಾಳಿ ತಾಲೂಕು ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಸಂಪ್ರದಾಯದಂತೆ ಬೆಳಗ್ಗೆ ಧಾರ್ಮಿಕ ವಿಧಿವಿಧಾನಗಳು ನಡೆದ ಬಳಿಕ ಮಧ್ಯಾಹ್ನ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರನ್ನು ನೆರವೇರಿಸುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ಸಿಕ್ಕಿತು.

ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹ ಆಂಜನೇಯನಿಗೆ ಜಯಘೋಷಗಳನ್ನು ಹಾಕಿತು. ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬಾಳೆಹಣ್ಣು, ಉತ್ತತ್ತಿಯನ್ನು ತೇರಿಗೆ ಎಸೆದು ಭಕ್ತಿ ಸಮರ್ಪಿಸಿದರು.

ಕೆಲವು ಭಕ್ತರು ಶ್ರೀಸ್ವಾಮಿ ಗರ್ಭಗುಡಿ ಮುಂಭಾಗದಲ್ಲಿ ಉರುಳು ಸೇವೆ ಮಾಡಿದರು. ಮಾರುತಿ ಯುವಕ ಸಂಘದ ದಾಸೋಹ ಸಮಿತಿ ಭಕ್ತರಿಗೆ ಪ್ರಸಾದದ ಜತೆಗೆ ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿತ್ತು.

ರಥೋತ್ಸವದ ಪ್ರಯುಕ್ತ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಪ್ರತಿ ಮನೆಗಳನ್ನು ಹಸಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿವಿಧ ಚಿತ್ತಾರದ ರಂಗೋಲಿಗಳನ್ನು ಬಿಡಿಸಲಾಗಿತ್ತು.
ಬಿಗಿ ಬಂದೋಬಸ್ತ್:
ಪೊಲೀಸ್‌ಇನ್ಸ್‌ಪೆಕ್ಟರ್ ಮುದ್ದುರಾಜು ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ದೇವಾಲಯ ಸಮಿತಿ ಅಧ್ಯಕ್ಷ ಸಿ.ಕೆ. ಶೇಖರಪ್ಪ, ಉಪ ತಹಸೀಲ್ದಾರ್ ಮಂಜುನಾಥ್ ಇಂಗಳಗೊಂದಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಗದೀಶ್, ಪ್ರಧಾನ ಅರ್ಚಕ ಶ್ರೀನಿವಾಸ್, ಪೀಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಜಿ. ಶಿವಕುಮಾರ್, ಗುರುರಾಜ್‌ಪಾಟೀಲ್, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಚಿದಾನಂದಮೂರ್ತಿ, ರೇಖಾ, ಮಾಜಿ ಅಧ್ಯಕ್ಷ ಧನಂಜಯ, ರಹಮತ್ ಉಲ್ಲಾ ಖಾನ್, ತಾಪಂ ಮಾಜಿ ಉಪಾಧ್ಯಕ್ಷ ತಿಪ್ಪೇಶಪ್ಪ ಇತರರು ಇದ್ದರು. *ಮೋದಿ ಮತ್ತೆ ಪ್ರಧಾನಿಯಾಗಲು ಭಕ್ತನ ಹರಕೆ
ಹೊನ್ನಾಳಿ ತಾಲೂಕು ಕುಂದೂರು ಗ್ರಾಮದ ಭಕ್ತನೊಬ್ಬ ಬಾಳೆಹಣ್ಣಿನಲ್ಲಿ ದೇಶದ ಮುಂದಿನ ಪ್ರಧಾನಿ ನರೇಂದ್ರ ಮೋದಿ ಎಂದು ಬರೆದು ಆಂಜನೆಯ ಸ್ವಾಮಿಯ ರಥಕ್ಕೆ ತೂರಿ ಪ್ರಾರ್ಥನೆ ಸಲ್ಲಿಸಿದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net