

ಹಾವೇರಿ: ದನದ ಕೊಟ್ಟಿಗೆಯಲ್ಲಿ ಕಟ್ಟಿದ 55 ಸಾವಿರ ರೂ. ಮೌಲ್ಯದ 3 ಕುರಿಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಗೌರಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗುಡ್ಡಪ್ಪ ಫಕ್ಕೀರಪ್ಪ ಗೆಜ್ಜೆಹಳ್ಳಿ (53) ಎಂಬುವರ ಕುರಿ ಕಳ್ಳತನ ಆಗಿರುವುದು.
ಇವರು ದನದ ಕೊಟ್ಟಿಗೆಯಲ್ಲಿ ಕುರಿಗಳನ್ನು ಕಟ್ಟಿದ್ದರು. ರಾತ್ರಿ ಸಮಯದಲ್ಲಿ ಯಾರೋ ಖದೀಮರು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.