

ಧಾರವಾಡ: 1980ರ ದಶಕದಲ್ಲಿ ದೇಶದಲ್ಲಿ ಏಕಧ್ರುವಿ ರಾಜಕಾರಣವಿತ್ತು. ಕಾಂಗ್ರೆಸ್ ಸೋಲಿಸಲು ದೇಶದ ಎಲ್ಲ ಪಕ್ಷಗಳು ಒಗ್ಗೂಡುತ್ತಿದ್ದವು. ಆದರೆ, 2014ರ ನಂತರ ಸ್ಥಿತಿಗತಿ ಸಂಪೂರ್ಣ ತದ್ವಿರುದ್ಧವಾಗಿದೆ. ಇಂದು ಬಿಜೆಪಿ ವಿರುದ್ಧ ದೇಶದ ಹಲವಾರು ಪಕ್ಷಗಳು ಒಗ್ಗೂಡಿದರೂ ಸೋಲಿಸಲು ಆಗುತ್ತಿಲ್ಲ. ಇದು ಪ್ರಧಾನಿ ನರೇಂದ್ರ ಮೋದಿ ಆಡಳಿತದ ಪ್ರಭಾವ ಎಂದು ಕೇಂದ್ರ ಗಣಿ ಮತ್ತು ಭೂವಿಜ್ಞಾನ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.
ಇಲ್ಲಿನ ತೇಜಸ್ವಿ ನಿನಗರ ಬಳಿಯ ಸುನೀಲ ಸರೂರ ಫಾಮ್ರ್ ಹೌಸ್ನಲ್ಲಿ ಬಿಜೆಪಿ ನಗರ ಘಟಕ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪಂ. ದೀನದಯಾಳ ಪ್ರಶಿಕ್ಷಣ ವರ್ಗ ಉದ್ಘಾಟಿಸಿ, ‘2014ರ ನಂತರ ಬದಲಾದ ರಾಜಕಾರಣ: ಭಾಜಪ ಮತ್ತು ನಮ್ಮ ಜವಾಬ್ದಾರಿ’ ವಿಷಯ ಕುರಿತು ಅವರು ಮಾತನಾಡಿದರು. 2014ರಿಂದ 2019ರವರೆಗೆ ಸಂಪೂರ್ಣ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತದ ಮೂಲಕ ಬಿಜೆಪಿ ಮನೆ ಮಾತಾಗಿದೆ ಎಂದರು.
ದೇಶದ ಭದ್ರತೆಯಿಂದ ಹಿಡಿದು ಆಹಾರ ಭದ್ರತೆವರೆಗೆ, ರೈತನಿಂದ ಹಿಡಿದು ಕೂಲಿ ಕಾರ್ವಿುಕರವರೆಗೆ ಬದಲಾವಣೆ ತಂದು ಪ್ರತಿಯೊಬ್ಬರೂ ತೃಪ್ತಿಕರ ಜೀವನ ನಡೆಸುವಂತಾಗಬೇಕು ಎಂಬುದು ಬಿಜೆಪಿ ಗುರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಶಾಸಕ ಅಮೃತ ದೇಸಾಯಿ, ಮುಖಂಡರಾದ ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ, ಈರೇಶ ಅಂಚಟಗೇರಿ, ಸುನೀಲ ಸರೂರ, ಸುಧಾ ಜಯರುದ್ರೇಶ, ಸುನೀಲ ಮೋರೆ, ಶರಣು ಅಂಗಡಿ, ಶ್ರೀನಿವಾಸ ಕೋಟ್ಯಾನ್, ಸಂತೋಷ ದೇವರಡ್ಡಿ, ಇತರರಿದ್ದರು.
ಟಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ಹಪ್ಪಳಿ ಪ್ರಾರ್ಥಿಸಿದರು.
ಬಿಜೆಪಿ ಕಾರ್ಯಕರ್ತರು ಫಲಾಪೇಕ್ಷೆ ಇಲ್ಲದೆ ದುಡಿಯುತ್ತಾರೆ. ಪಕ್ಷದ ಧ್ಯೇಯ, ಸಿದ್ಧಾಂತಗಳನ್ನು ಒಪ್ಪಿ ಕೆಲಸ ಮಾಡುತ್ತಾರೆ. ಅದಕ್ಕೆ ಕಾರಣ ಪ್ರಶಿಕ್ಷಣ ವರ್ಗ.ಅರವಿಂದ ಬೆಲ್ಲದ, ಶಾಸಕ
ರೈತ ಹೋರಾಟ ಪ್ರತಿಪಕ್ಷಗಳ ಕುತಂತ್ರ
ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ರೈತರ ಶೋಷಣೆ ತಪ್ಪಿಸಲು ರೈತಪರ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಕೆಲ ಪಕ್ಷಗಳು ರೈತರ ದಾರಿ ತಪ್ಪಿಸಿ, ಪ್ರತಿಭಟನೆ ನಡೆಸುವ ಹುನ್ನಾರ ನಡೆಸಿವೆ ಎಂದು ಕೇಂದ್ರ ಗಣಿ ಮತ್ತು ಭೂವಿಜ್ಞಾನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಪಿಎಂಸಿ ದೋಷಮುಕ್ತ ಮಾಡಲು ಕಾಯ್ದೆ ಜಾರಿಗೆ ತರಲಾಗಿದೆ. ಆದರೆ ಪ್ರತಿಪಕ್ಷಗಳು ಷಡ್ಯಂತ್ರ ರೂಪಿಸಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿವೆ. ಇದರಿಂದ ಸೈನಿಕರಿಗೆ ಆಹಾರ ತಲುಪಿಸಲು ಸಮಸ್ಯೆ ಮಾಡುತ್ತಿರುವುದು ಸರಿಯಲ್ಲ ಎಂದರು.
ದೇಶ ಮತ್ತು ರಾಜ್ಯದಲ್ಲಿ ರೈತರನ್ನು ಕಾಂಗ್ರೆಸ್ನವರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕೆಲ ರೈತರನ್ನು ಮುಂದೆ ಬಿಟ್ಟು ಷಡ್ಯಂತ್ರ ನಡೆಸಿದ್ದಾರೆ. ಈಗ ವಿರೋಧ ಮಾಡುವವರೇ ಹಿಂದೆ ಎಪಿಎಂಸಿ ಮುಕ್ತ ಮಾಡುವಂತೆ ಕೇಳಿದ್ದರು ಎಂದು ಸಚಿವ ಜೋಶಿ ತಿರುಗೇಟು ನೀಡಿದರು.
ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಯಾವತ್ತೂ ಯಾರ ಪರವೂ ಇಲ್ಲ. ಅದು ಕೇವಲ ಅಧಿಕಾರ, ಭ್ರಷ್ಟಾಚಾರ, ದಲ್ಲಾಳಿ, ದೇಶ ವಿಭಜಕರ ಪರವಾಗಿದೆ. ಎಂದೂ ಅಲ್ಪಸಂಖ್ಯಾತರ ಪರ ಇಲ್ಲ. ಮುಸ್ಲಿಂ, ಹಿಂದು ಮಾತ್ರವಲ್ಲ, ಪ್ರಜಾಪ್ರಭುತ್ವದ ಪರವೂ ಇಲ್ಲ ಎಂದು ಟೀಕಿಸಿದರು.
EndFragment