ಶವ ತರಲೆಂದು ಹೊರಟವರೇ ಶವವಾದರು...

22 KLG-crime
Published on

ಕಲಘಟಗಿ: ಶವ ತರಲೆಂದು ಹುಬ್ಬಳ್ಳಿಗೆ ತೆರಳá-ತ್ತಿದ್ದ ಕ್ರೂಸರ್​ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಹುಬ್ಬಳ್ಳಿ- ಕಾರವಾರ ರಸ್ತೆಯ ರಾಮನಾಳ ಕ್ರಾಸ್ ಬಳಿ ಸೋಮವಾರ ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ನಂದಿಗದ್ದಿ ಗ್ರಾಮದ ಕ್ರೂಸರ್ ಚಾಲಕ ಮಾರುತಿ ಉಬಳೆಕರ (35), ಅಮೃತ ಪಾಟೀಲ (38), ಜೀವಪ್ಪ ಗೌಡ (35) ಮೃತಪಟ್ಟವರು. ದೇವರಾಜ ಕಲಾಲ ಹಾಗೂ ಶಿವಾಜಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ: ಹಳಿಯಾಳ ತಾಲೂಕಿನ ನಂದಿಗದ್ದ ಗ್ರಾಮದ ವ್ಯಕ್ತಿಯೊಬ್ಬರು ಭಾನá-ವಾರ ಮ್ಸ್​ನಲ್ಲಿ ಮೃತಪಟ್ಟಿದ್ದರು. ಅವರ ಶವ ತರಲೆಂದು ಗ್ರಾಮದ ಐವರು ಕ್ರೂಸರ್ ವಾಹನದಲ್ಲಿ ಹುಬ್ಬಳ್ಳಿಗೆ ತೆರಳá-ತ್ತಿದ್ದಾಗ ಹುಬ್ಬಳ್ಳಿಯಿಂದ ಗೋವಾಗೆ ಹೊರಟಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ನಜ್ಜುಗá-ಜ್ಜಾಗಿದೆ. ಜತೆಗೆ ಪಕ್ಕದಲ್ಲೇ ಇದ್ದ ಲಾರಿಗೂ ಬಸ್ ಡಿಕ್ಕಿ ಹೊಡೆದು ಲಾರಿ ಜಖಂಗೊಂಡಿದೆ.

ಸ್ಥಳಕ್ಕೆ ಕಲಘಟಗಿ ಠಾಣೆ ಇನ್​ಸ್ಪೆ್ಪಕ್ಟರ್ ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net