ಸರ್ಕಾರಿ ಶಾಲೆಯಲ್ಲಿ ಕಲಿತವರು ಜೀವನದಲ್ಲಿ ಯಶಸ್ವಿ

ಚಿತ್ರ 28ಎಸ್ ಡಿ ಪಿ 01.
ನೆಲ್ಯಹುದಿಕೇರಿಯ ಕೆಪಿಎಸ್ ಶಾಲೆಯ ನೂತನ ಕಟ್ಟಡಡವನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿದರು. ಪಿ.ಕೆ.ಮುಸ್ತಫಾ, ದಮಯಂತಿ, ನಂಜುಂಡಸ್ವಾಮಿ, ವಸಂತಕುಮಾರ್, ಸುಜಾತಾ, ಶಶಿಧರ್ ಇತರರಿದ್ದರು.
Published on

ಸಿದ್ದಾಪುರ: ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಜೀವನದ ಏಳು ಬೀಳುಗಳಲ್ಲಿ ಬೆಳೆದ ಪರಿಣಾಮವೇ ಅವರ ಜೀವನದಲ್ಲಿ ಯಶಸ್ವಿಯಾಗಿ ಬೆಳೆಯಲು ಸಾಧ್ಯ ಎಂದು ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.

ಮಂಗಳವಾರ ನೆಲ್ಯಹುದಿಕೇರಿಯ ಕೆಪಿಎಸ್ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ನೆಲ್ಯಹುದಿಕೇರಿ ಕೆಪಿಎಸ್ ಶಾಲೆಯು ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಅಭಿವೃದ್ಧಿ ಹೊಂದಿದೆ. ಇದೀಗ 2 ಕೋಟಿ ರೂ. ವೆಚ್ಚದಲ್ಲಿ 11 ಕೊಠಡಿಗಳನ್ನೊಳಗೊಂಡ ನೂತನ ಸುಸಜ್ಜಿತ ಕೊಠಡಿಯು ಉದ್ಘಾಟನೆಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ಮಾಡಲಾಗಿದೆ ಎಂದರು.

ಇತ್ತೀಚೆಗೆ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವ ನಡುವೆ ನೆಲ್ಯಹುದಿಕೇರಿ ಕೆಪಿಎಸ್ ಶಾಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಹೊಂದಿರುವುದು ವಿಶೇಷವಾಗಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಹೆಚ್ಚಳವಾಗುತ್ತಿದ್ದಂತೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಈ ನಿಟ್ಟಿನಲ್ಲಿ ಸಿಬ್ಬಂದಿ ಕೊರತೆಯಾಗದಂತೆ ಎಚ್ಚರ ವಹಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪಾಲಕರು ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ಹಾಕಬಾರದು. ಬದಲಿಗೆ ಕಲಿಕೆಯೊಂದಿಗೆ ಕಲೆ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಮೂಲಕ ಸಾಧನೆಗೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಪ್ರೌಢಶಾಲಾವಿಭಾಗದ ಫುಟ್‌ಬಾಲ್ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಂತರ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು.

ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪಿ.ಕೆ.ಮುಸ್ತಫಾ, ಗ್ರಾಪಂ ಅಧ್ಯಕ್ಷೆ ದಮಯಂತಿ, ಪಿಡಿಒ ನಂಜುಂಡಸ್ವಾಮಿ, ವಸಂತಕುಮಾರ್, ಸದಸ್ಯರಾದ ಹಕೀಂ, ಹನೀಫ್, ಅಫ್ಸಲ್, ಸುಜಾತಾ, ತಾಲೂಕು ಗ್ಯಾರಂಟಿ ಯೋಜನ ಅನುಷ್ಠಾನ ಸಮಿತಿ ಸದಸ್ಯ ಶಶಿಧರ್, ಕೆಡಿಪಿ ಸದಸ್ಯೆ ಸುನಿತಾ ಮಂಜುನಾಥ್, ಬಿಇಒ ಭಾಗ್ಯಾ, ಪ್ರಾಂಶುಪಾಲರಾದ ಆಲ್ವರೀಸ್, ಉಪಪ್ರಾಂಶುಪಾಲರಾದ ಅನಿಲ್, ಮುಖ್ಯಶಿಕ್ಷಕಿ ಭಾರತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net