ಆಹಾರಕ್ಕೆ ಗೌರವಿಸುವವರಿಗೆ ಬಡತನ ಇರಲ್ಲ

Those who respect food do not have poverty.
ಇಳಕಲ್ಲದ ಎಸ್.ಆರ್.ಕಂಠಿ ವೇದಿಕೆಯು ಕುಲಕರ್ಣಿ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-1 ರಲ್ಲಿ ಆಯೋಜಿಸಿದ್ದ ಹಾಲು ಕುಡಿಯುವ ಹಬ್ಬದ ಕಾರ್ಯಕ್ರಮದಲ್ಲಿ ಗುರುಮಹಾಂತ ಶ್ರೀಗಳು ಮಾತನಾಡಿದರು. ಮಹಾಂತೇಶ ಹನುಮನಾಳ, ಮಹಾಂತೇಶ ಹೊಸೂರ, ಆರ್.ಎಂ.ಮಾಸರೆಡ್ಡಿ, ಎ.ಎಸ್.ಕುರಿ, ಮಹಾದೇವಿ ತೊಂತನಾಳ ಇದ್ದರು.
Published on

ಇಳಕಲ್ಲ: ಕಲ್ಲು ಮಣ್ಣಿಗೆ ಹಾಲು ಹಾಕಿ ವ್ಯರ್ಥ ಮಾಡಬಾರದು ಎಂದು ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.

ನಗರದ ಎಸ್.ಆರ್.ಕಂಠಿ ವೇದಿಕೆಯು ಕುಲಕರ್ಣಿ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-1 ರಲ್ಲಿ ಮಂಗಳವಾರ ಆಯೋಜಿಸಿದ್ದ ಹಾಲು ಕುಡಿಯುವ ಹಬ್ಬದ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಆಹಾರ ದೇವರ ಸ್ವರೂಪ. ಆಹಾರದಿಂದ ಮನುಷ್ಯನಿಗೆ ಚೈತನ್ಯ ದೊರಕುವುದು. ಇಂತಹ ಅಮೂಲ್ಯವಾದ ಜೀವಸತ್ವ ಆಹಾರವನ್ನು ಮೌಢ್ಯ ಆಚರಣೆಗಳ ಮೂಲಕ ಹಾಳು ಮಾಡಬಾರದು. ಆಹಾರವನ್ನು ಹಾಳು ಮಾಡುವುದರಿಂದ ಪಾಪ ಅಂಟಿಕೊಳ್ಳುವುದು. ಆಹಾರ ಗೌರವಿಸುವವರಿಗೆ ಬಡತನ ಬರುವುದಿಲ್ಲ ಎಂದರು.

ಪಂಚ ಯೋಜನೆಗಳ ಅನುಷ್ಠಾನ ಸಮಿತಿಯ ಇಳಕಲ್ಲ ತಾಲೂಕು ಅಧ್ಯಕ್ಷ ಮಹಾಂತೇಶ ಹನಮನಾಳ, ಇಳಕಲ್ಲ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹಾಂತೇಶ ಹೊಸೂರ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಂ.ಮಾಸರೆಡ್ಡಿ, ಮುಖ್ಯ ಗುರುಮಾತೆ ಎ.ಎಸ್. ಕುರಿ, ಕಂಠಿ ವೇದಿಕೆ ಅಧ್ಯಕ್ಷೆ ಮಹಾದೇವಿ ತೊಂತನಾಳ, ಕರ್ನಾಟಕ ರಕ್ಷಣಾ ವೇದಿಕೆ ನಗರ ಚಾಲಕರ ಘಟಕದ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಶೈಲಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಶ್ರೇಯಾ ಕಾಂಬಳೆ ಸಂಗಡಿಗರು ಪ್ರಾರ್ಥಿಸಿದರು. ವಿಜಯಲಕ್ಷೀ ಲೆಕ್ಕಿಹಾಳ ಸ್ವಾಗತಿಸಿದರು. ಎಂ.ಎಸ್.ತಳವಾರ ನಿರೂಪಿಸಿದರು. ನೀಲಾಂಬಿಕಾ ಬಾದಿಮನಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net