

ವಿಜಯಪುರ: ಮನುಷ್ಯ ಕೇವಲ ಮನೆಯನ್ನಷ್ಟೇ ವಾಸ್ತು ಪ್ರಕಾರ ಕಟ್ಟಿಸಿಕೊಂಡರೇ ಸಾಲದು. ಬದಲಾಗಿ ಅಲ್ಲಿ ವಾಸಿಸುವ ಪ್ರತಿಯೊಬ್ಬರ ಮನಸ್ಸು ವಾಸ್ತು ಪ್ರಕಾರ ಇಟ್ಟುಕೊಳ್ಳಬೇಕು ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ "ಶ್ರೀ ಶಿವಾನುಭವ ಮಂಟಪ' ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ, ವೇದಗಳನ್ನು ಅರಿತವರು ದೊಡ್ಡವರಲ್ಲ. ಜನರ ವೇದನೆ ಅರಿತು ಪರಿಹರಿಸುವವರೇ ದೊಡ್ಡವರು ಎಂದರು.
ಜಗತ್ತಿನಲ್ಲಿ ಯಾವುದೂ ಕನಿಷ್ಠವಲ್ಲ, ಅದೇ ರೀತಿ ಯಾವುದೂ ಶ್ರೇಷ್ಠವೂ ಅಲ್ಲ. ಜಗತ್ತು ಬೆಳಗುವ ಸೂರ್ಯ ಶ್ರೇಷ್ಠ, ಜತೆಗೆ ಮನೆ ಕತ್ತಲು ದೂರ ಮಾಡುವ ದೀಪ ಕನಿಷ್ಠ ಎಂದು ಹೇಳಲಾದಿತೇ? ಎಂದ ಸ್ವಾಮೀಜಿಗಳು, ಗೋಳಗುಮ್ಮಟದ ಏಳು ಸಾರಿ ಪ್ರತಿಧ್ವನಿಸಿದರೆ, ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾರಿದ ತತ್ವಗಳು ಲ ಲ ಹೃದಯಗಳಲ್ಲಿ ಇಂದಿಗೂ ಪ್ರತಿಧ್ವನಿಸುತ್ತಿವೆ ಎಂದರು.
ಭೂಮಿ ಮೇಲೆ ಯಾರೂ ಬಡವರಿಲ್ಲ, ಶ್ರೀಮಂತರಿಲ್ಲ. ಮನೆ ದೊಡ್ಡದಿರುವವರು ಶ್ರೀಮಂತರಲ್ಲ. ಮನಸ್ಸು ದೊಡ್ಡದಿರುವವರೇ ಶ್ರೀಮಂತರು. ಕೆಲವರು ಬೆಕ್ಕು ಅಡ್ಡ ಬಂದರೆ ಅಶುಭ ಅಂತಾರೆ. ಆದರೆ ಅದೇ ಬೆಕ್ಕು ಮನುಷ್ಯ ಅಡ್ಡ ಬಂದರೆ ನನಗೆ ಇವತ್ತು ಹಾಲು ಸಿಗಲ್ಲ ಅನ್ನತೈತಿ. ಹಲವರು ಮನೆಗೆ ಬಂದು ಮೆಟ್ಟಿಲು ತುಳಿದ ತಕ್ಷಣ ಈ ಮೆಟ್ಟಿಲು ಇಲ್ಲಿ ಇರಬಾರದಿತ್ತು, ಬಾಗಿಲು ಇಲ್ಲಿ ಇರಬಾರದಿತ್ತು ಅಂತಾರೆ. ಅದನ್ನು ಕೇಳಿದ ಮನೆ ಕೂಡಾ ನೀನೇ ಒಳಗೆ ಬರಬಾರದಿತ್ತು ಅಂತ ಹೇಳತೈತಿ ಎಂದ ಶ್ರೀಗಳು, ನಯನಗಳಿಂದ ನೋಟದ ಅನುಭವ, ಕರಣಗಳಿಂದ ಶಬ್ದದ ಅನುಭಾವದಂತೆ ಶಿವನನ್ನು ಅನುಭಾವಿಸುವ ದಾರಿ ಕಂಡುಕೊಳ್ಳಬೇಕಿದೆ. ವಿಶ್ವದ ಒಟ್ಟಾರೆ ಮೊತ್ತವೇ ದೇವರು. ದೇವರು ನಿರಾಕಾರ, ಆತನ ಸೃಷ್ಟಿ ಸಾಕಾರ ಎಂದು ಸರಳವಾಗಿ ವಿವರಿಸಿದರು.
ಜೀವನ ಏನು? ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಆದಿ ಮಾನವನಿಂದ ಹಿಡಿದು ಆಧುನಿಕ ಮಾನವನವರೆಗೂ ಇದೆ. ಪಾಶ್ಚಾತ್ಯ ಚಿಂತಕ ಜೇಮ್ಸ್ ಜಾಯ್ಸ್ ಹೇಳುವಂತೆ, ಜೀವನ ಎಂದರೆ ಅನುಭವಗಳ ಪ್ರವಾಹ. ಜಗದ ವಿಷಯ ವಸ್ತುಗಳು ಒಮ್ಮೊಮ್ಮೆ ಸುಖದ ಅನುಭವ, ಇನ್ನೊಮ್ಮೆ ದುಖದ ಅನುಭವ ನೀಡುತ್ತವೆ ಎಂದ ಅವರು, ಆಕಾಶಕಾಯಗಳು, ಗ್ರಹಗಳು, ನತ್ರಗಳು ಆಕಾಶ ಮಂಡಳದಲ್ಲಿ ತಿರುಗುತ್ತಲೇ ಇವೆ. ಅವುಗಳನ್ನು ಹಿಡಿದಿಟ್ಟಿರುವವರು ಯಾರು? ಲಿಫ್ಟ್ ಇರಿಗೇಷನ್ ಇಲ್ಲದೇ ತೆಂಗಿನ ಕಾಯಿಗೆ ನೀರು ಬಂದಿರುವುದು ಹೇಗೆ? ತಿಪ್ಪೆಯ ಗರ್ಭದಲ್ಲಿ ಅರಳುವ ಮಲ್ಲಿಗೆಯಲ್ಲಿ ಸೌಂದರ್ಯ ಬಿತ್ತಿದವರು ಯಾರು? ದೇವನನ್ನು ಕಾಣುವ ಕಣ್ಣುಬೇಕು. ಆಗ ದೇವ ಎಲ್ಲೆಲ್ಲೂ ಕಾಣುತ್ತಾನೆ ಎಂದರು.
ಮುಖ್ಯ ಅತಿಥಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಮಾತನಾಡಿ, ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಸ್ಥಾಪಿಸಿದ ಸಿದ್ಧೇಶ್ವರ ಸಂಸ್ಥೆ ಸಹ ಇಂದು ಉನ್ನತ ಮಟ್ಟದ ಸೇವೆ ಮಾಡುತ್ತಿದೆ. ಸಿದ್ಧೇಶ್ವರ ಬ್ಯಾಂಕ್ ಸಹ ಒಂದಾನೊಂದು ಕಾಲದಲ್ಲಿ ತನ್ನದೇ ಆದ ಪ್ರತಿಷ್ಠೆ ಪಡೆದಿತ್ತು. ಆದರೆ ಇಂದು ಆ ವೈಭವ ಕಾಣುತ್ತಿಲ್ಲ. ಸಿದ್ಧೇಶ್ವರ ಬ್ಯಾಂಕ್ ಮತ್ತೆ ಗತವೈಭವಕ್ಕೆ ಮರಳಬೇಕಿದೆ ಎಂದು ಆಶಯ ವ್ಯಕ್ತಪಡಿಸಿದ ಅವರು, ಬಿಎಲ್ಡಿಇ, ಸಿದ್ಧೇಶ್ವರ ಸಂಸ್ಥೆ ಹಾಗೂ ಸಿದ್ಧೇಶ್ವರ ಬ್ಯಾಂಕ್ ಈ ಎಲ್ಲವೂ ಶತಮಾನೋತ್ಸವ ಕಂಡಿವೆ ಎಂದರು.
ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿ, 1995 ರಿಂದ ಪವಿತ್ರ ಸಿದ್ಧೇಶ್ವರ ಸಂಸ್ಥೆ ಅಧ್ಯನಾಗಿ ಇಂದಿಗೂ ಸೇವೆ ಮಾಡುವ ಸೌಭಾಗ್ಯ ಲಭಿಸಿದೆ. ನಮ್ಮ ಸಂಸ್ಥೆಯ ಬಗ್ಗೆ ಜನರಿಗೆ ಗೌರವ ಎಷ್ಟಿದೆ ಎಂದರೆ ಇಲ್ಲಿಯವರೆಗೆ ಚುನಾವಣೆ ನಡೆದಿಲ್ಲ. ಸದ್ಯ ಸಂಸ್ಥೆ ಆಡಳಿತ ವ್ಯಾಪ್ತಿ ವಿಸ್ತರಣೆಯಾಗಿದ್ದು, ಅದರ ಜತೆಗೆ ನಿರ್ದೇಶಕರ ಸಂಖ್ಯೆ ಕೂಡ 21 ಕ್ಕೆ ಏರಿಕೆ ಮಾಡಲಾಗಿದೆ. ಸದ್ಯ ಸಂಸ್ಥೆಯು 460 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ ಎಂದರು.
ಸಂಸ್ಥೆ ವತಿಯಿಂದ ಹಲವು ಶಿಣ ಸಂಸ್ಥೆಗಳ ಸ್ಥಾಪನೆ, ಗೋ ರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿದೆ. ಕಟುಕರ ಪಾಲಾಗುತ್ತಿದ್ದ ಆಕಳುಗಳನ್ನು ಸಂರಸಿ ಪೋಷಿಸುವ ಕಾರ್ಯ ನಡೆಯುತ್ತಿದೆ ಎಂದರು.
ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿದರು. ಸಂಸ್ಥೆ ಚೇರ್ಮನ್ ಬಸಯ್ಯ ಹಿರೇಮಠ, ಾನಯೋಗಾಶ್ರಮದ ಅಧ್ಯ ಗುರುಗಳಾದ ಡಾ. ಬಸವಲಿಂಗ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಮುಖರಾದ ಸಂ.ಗು. ಸಜ್ಜನ, ಸದಾಶಿವ ಗುಡ್ಡೋಡಗಿ, ಎಂ.ಎಸ್. ಕರಡಿ, ವಿಜಯಕುಮಾರ ಡೋಣಿ ಮತ್ತಿತರರಿದ್ದರು.
ಶಿವಾನುಭವ ಸಮುದಾಯ ಭವನ ದಾನಿಗಳಿಗೆ ಹಿರಿಯರಾದ ಸಿದ್ದರಾಮಪ್ಪ ಉಪ್ಪಿನ, ಜಿ.ಪಂ. ಮಾಜಿ ಸದಸ್ಯೆ ಸೌಮ್ಯಾ ಕಲ್ಲೂರ, ವೇದ ಅಕಾಡೆಮಿ ಸಂಸ್ಥಾಪಕ ಅಧ್ಯ ಡಾ. ಶಿವಾನಂದ ಕೆಲೂರ, ಗಂಗಾಧರ ಸಾಲಕ್ಕಿ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.