ಎಲ್ಲರಿಗೂ ಬೆಳಕಾಗಿ ಬದುಕಿದವರು

23SANKESHWAR2
Published on

ಸಂಕೇಶ್ವರ: ಸಹಕಾರಿ ಪದಕ್ಕೆ ಅನ್ವರ್ಥನಾಮ ಎಂಬಂತೆ ಎಲ್ಲರಿಗೂ ಬೇಕಾದವರಾಗಿ ಬಾಳಿದ ಅಪ್ಪಣಗೌಡರು ಅಪರೂಪದ ನಾಯಕ, ಅಜಾತಶತ್ರು. ಮಾದರಿ ಹಿರಾಶುಗರ್ಸ್ ಕಾರ್ಖಾನೆ ಸ್ಥಾಪಿಸುವ ಮೂಲಕ ರೈತರ ಬಾಳು ಬೆಳಗಿದರು ಎಂದು ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಸಭಾಗೃಹದಲ್ಲಿ ಗುರುವಾರ ಆಯೋಜಿಸಿದ್ದ ಅಪ್ಪಣಗೌಡ ಪಾಟೀಲ ಅವರ ೫೧ನೆಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ಅಪ್ಪಣಗೌಡ ಪಾಟೀಲ ಅವರು ಸ್ವಾತಂತ್ರ‍್ಯ ಸೇನಾನಿ, ಕರ್ನಾಟಕ ಏಕೀಕರಣ ಚಳುವಳಿಯ ಮೂಲಕ ನೀಡಿದ ಕೊಡುಗೆ ಅನನ್ಯ ಎಂದರು.

ಕಾರ್ಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಮಾತನಾಡಿ, ಅಪ್ಪಣಗೌಡರು ಜನರ ಏಳಿಗೆಗಾಗಿ ಸ್ಥಾಪಿಸಿದ್ದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ, ಎಸ್‌ಡಿವಿಎಸ್ ಸಂಘದಂತ ಅನೇಕ ಸಂಸ್ಥೆಗಳು ಹೆಮ್ಮರವಾಗಿ ಬೆಳೆದಿವೆ ಎಂದರು.

ವಿವಿಧ ಕ್ರೀಡಾ ಸ್ಪರ್ಧೆ ವಿಜೇತ ಕಾರ್ಖಾನೆಯ ಕಾರ್ಮಿಕರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ಶಿವನಾಯಿಕ ನಾಯಿಕ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಸುರೇಂದ್ರ ದೊಡ್ಡಲಿಂಗನವರ, ಬಸಪ್ಪ ಮರಡಿ, ಮಲ್ಲಿಕಾರ್ಜುನ ಪಾಟೀಲ, ಸುರೇಶ ರಾಯಮಾನೆ, ಶಾರದಾ ಪಾಟೀಲ, ಮುಖಂಡರಾದ ಪವನ ಪಾಟೀಲ, ಮಕ್ಬುಲ್ ಮುಲ್ಲಾ, ಬಸಗೌಡ ಮಗೆನ್ನವರ, ಎನ್.ಬಿ. ಪಾಟೀಲ, ಬಾಬಾಸಾಹೇಬ ಪಾಟೀಲ, ಈರಗೌಡ ಪಾಟೀಲ, ಜಿಎಂ ವೀರನಗೌಡ ದೇಸಾಯಿ, ಆಡಳಿತಾಽಕಾರಿ ರವೀಂದ್ರ ಚೌಗಲಾ, ಕಾರ್ಯಾಲಯ ಅಧೀಕ್ಷಕ ಪ್ರಭು ಡಬ್ಬನ್ನವರ, ಮಹಾನಿಂಗ ಹಂಜಿ, ಮನೋಜ ಹಲಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net