ಯೋಗ ಒಲಿಸಿಕೊಂಡವರೇ ಭಾಗ್ಯವಂತರು

IMG_20240621_071841
ಹೊಳೆನರಸೀಪುರ ಪಟ್ಟಣದ ಯೋಗ ಭವನದಲ್ಲಿ ಪತಂಜಲಿ ಯೋಗಕೂಟದ ಸದಸ್ಯರು ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ಭವನದಲ್ಲಿ ಯೋಗಾಸನ ಪ್ರದರ್ಶನ ನೀಡಿದರು. ಗಣೇಶ್‌ಬಾಬು, ದಿನೇಶ್, ಕರುಣಾಕರ್, ಲೋಕೇಶ್, ಪ್ರೇಮಾ ಮಂಜುನಾಥ್, ನರಸಿಂಹ, ವಾಸುದೇವಮೂರ್ತಿ ಇತರರಿದ್ದರು.
Published on

ಹೊಳೆನರಸೀಪುರ: ಯೋಗ ಕಲಿತವರು, ಯೋಗ ಒಲಿಸಿಕೊಂಡವರೇ ಭಾಗ್ಯವಂತರು. ಯೋಗವನ್ನು ಎಲ್ಲರೂ ಒಲಿಸಿಕೊಳ್ಳಬಹುದು. ನಿತ್ಯ ಆಸಕ್ತಿಯಿಂದ ಅಭ್ಯಾಸ ಮಾಡಿದರೆ ಯೋಗ ಎಲ್ಲರಿಗೂ ಸಿದ್ಧಿಸುತ್ತದೆ. ನಿತ್ಯ ಯೋಗ ಮಾಡುವವರ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಯೋಗ ಶಿಕ್ಷಕ ಗಣೇಶ್‌ಬಾಬು ಅಭಿಪ್ರಾಯಪಟ್ಟರು.

ಯೋಗ ಭವನದಲ್ಲಿ ಪತಂಜಲಿ ಯೋಗಕೂಟ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಹ ಹಾಗೂ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಸನ ಅತ್ಯಂತ ಪರಿಣಾಮಕಾರಿಯಾದ ಅಭ್ಯಾಸ. ಆದ್ದರಿಂದ ಪ್ರತಿಯೊಬ್ಬರೂ ನಿತ್ಯ ಯೋಗಾಸನ ಮಾಡಿ. ಪತಂಜಲಿ ಯೋಗಕೂಟದಲ್ಲಿ ಉಚಿತವಾಗಿ ಯೋಗಾಸನ ಕಲಿಸಲಾಗುತ್ತಿದೆ. 25 ವರ್ಷಗಳ ಹಿಂದೆ ಯೋಗಾಸನ ಮಾಡಲು ಪ್ರಾರಂಭಿಸಿ 70 ವರ್ಷ 80 ವಯೋಮಾನದವರೂ ಯೋಗ ಮಾಡುತ್ತಿದ್ದಾರೆ. ಎಲ್ಲದಕ್ಕಿಂತ ಆರೋಗ್ಯ ಮುಖ್ಯ ಎಂಬುದನ್ನು ಅರಿತು ಯೋಗಾಭ್ಯಾಸದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

ಭಾಗವಹಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಿವಿಧ ಬಗೆಯ ಯೋಗಾಸನಗಳನ್ನು ಮಾಡಿಸಿ ಯಾವ ಯಾವ ಆಸನಗಳಿಂದ ಏನೇನು ಪ್ರಯೋಜನ? ಎಂಬುದನ್ನು ವಿವರಿಸಿದರು. ದಿನೇಶ್, ಕರುಣಾಕರ್, ಲೋಕೇಶ್, ಪ್ರೇಮಾ ಮಂಜುನಾಥ್, ನರಸಿಂಹ, ನಾರಾಯಣ, ವಾಸುದೇವಮೂರ್ತಿ , ಸತ್ಯನಾರಾಯಣಶೆಟ್ಟಿ, ಶೈಲಜಾ, ಲಲಿತಾ ದಯಾನಂದ್, ಪ್ರಭಾ, ರೇಣುಕಾ, ಸುಜಾತಾ, ಪ್ರತಿಮಾ, ನೇತ್ರಾವತಿ, ಮಹೇಶ್ವರಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net