ಸಿಜೆಐಗೆ ಅಪಮಾನಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಿ

ಮಾನ್ವಿಯ ಬಸವವೃತ್ತದಲ್ಲಿ ಸಂವಿಧಾನ ಸಂರಕ್ಷಣ ಸಮಿತಿ ತಾಲೂಕು ಘಟಕದಿಂದ ತಹಸೀಲ್ದಾರ್ ಭೀಮರಾಯ ರಾಮಸಮುದ್ರಗೆ ಮನವಿ ಸಲ್ಲಿಸಲಾಯಿತು. ಸಮಿತಿ ತಾಲೂಕು ಪದಾಧಿಕಾರಿಗಳಾದ ಯಲ್ಲಪ್ಪ ಬಾದರದಿನ್ನಿ, ಪ್ರೀತಮ್ ಕೊಡ್ಲಿ, ಜೀಶನಾ ಖಾದ್ರಿ, ಸೈಯ್ಯದ್ ಅಕ್ಬರ್‌ಪಾಷಾ, ಪಿ.ರವಿಕುಮಾರ, ಕಿರಿಲಿಂಗಪ್ಪ, ಶಿವರಾಜ ಉಮಳಿಹೊಸೂರು, ಸೈಯ್ಯದ್ ಸಜ್ಜಾದ್ ಮತವಾಲೆ ಗುರು ಇತರರಿದ್ದರು.

Published on

ಮಾನ್ವಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿ ಅಪಮಾನ ಮಾಡಿರುವುದನ್ನು ಖಂಡಿಸಿ ಸಂವಿಧಾನ ಸಂರಕ್ಷಣ ಸಮಿತಿ ತಾಲೂಕು ಘಟಕದಿಂದ ಪಟ್ಟಣದ ಬಸವ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರಗೆ ಮನವಿ ಸಲ್ಲಿಸಲಾಯಿತು.

ಸುಪ್ರೀಕೊರ್ಟ್ ಸಿಜೆಐ ಮೇಲೆ ದಾಳಿ ನಡೆಸಿದ ವಕೀಲ ರಾಕೇಶ್ ಕಿಶೋರ್ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕದಡುವ ಸಂಘ ಪರಿವಾರ ಮತ್ತು ಮತೀಯವಾದಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಪಕ್ಷ ಹಾಗೂ ಧರ್ಮ ಬಿಟ್ಟು ಹೋರಾಡಬೇಕು. ದೇಶಕ್ಕೆ ಅತಿದೊಡ್ಡ ಕವಚವಾದ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ವಕೀಲ ರಾಕೇಶ್ ಅವರನ್ನು ಬಂಧಿಸಿ ಗಲ್ಲು ಶಿಕ್ಷೆಗೆ ನೀಡಬೇಕು ಎಂದು ಆಗ್ರಹಿಸಿದರು.

ರಾಜತಾಂತ್ರಿಕ ವ್ಯವಸ್ಥೆಯಲ್ಲಿ ರಾಜರೇ ಪ್ರಭುಗಳಾಗಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಆದ್ದರಿಂದ ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ನ್ಯಾಯಾಂಗ ವ್ಯವಸ್ಥೆ ನಿರ್ಮಿಸಿದ್ದಾರೆ. ಆದರೆ, ಮನುವಾದಿ ವಕೀಲ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಎಂದು ದೂರಿದರು.

ಸಂವಿಧಾನ ಸಂರಕ್ಷಣ ಸಮಿತಿ ತಾಲೂಕು ಪದಾಧಿಕಾರಿಗಳಾದ ಯಲ್ಲಪ್ಪ ಬಾದರದಿನ್ನಿ, ಶರಣಕುಮಾರ ಮುದ್ದಮಗುಡ್ಡಿ, ಪ್ರೀತಮ್ ಕೊಡ್ಲಿ, ಜೀಶನಾ ಖಾದ್ರಿ, ಸೈಯ್ಯದ್ ಅಕ್ಬರ್‌ಪಾಷಾ, ಪಿ.ರವಿಕುಮಾರ, ಸೈಯ್ಯದ್ ಖಾಲೀದ್‌ಖಾದ್ರಿ, ಕಿರಿಲಿಂಗಪ್ಪ ಕವಿತಾಳ, ಮೂಕಪ್ಪ ಕಟ್ಟಿಮನಿ, ಯಲ್ಲಪ್ಪ ಸೀಕಲ್, ಸಂಪತರಾಜ್, ರಾಮಣ್ಣ ಕಣಕಲ್, ಶಿವರಾಜ ಉಮಳಿಹೊಸೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net