

ಧಾರವಾಡ: ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅಗ್ನಿಪರೀಕ್ಷೆ ಎದುರಿಸಲು ಬಿಜೆಪಿಯವರು ಸಿದ್ಧರಾಗಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸರ್ಕಾರದ ಮೇಲೆ ಚಾರ್ಜ್ಶೀಟ್ ಮಾಡಿದ್ದಾರೆ. ಅವರು ಮೊದಲು ಪ್ರತಿಪಕ್ಷದ ನಾಯಕರನ್ನು ನೇಮಿಸಲಿ. 100 ದಿನಗಳಾದರೂ ಪ್ರತಿಪಕ್ಷದ ನಾಯಕರಿಲ್ಲದಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದರು.
ಭ್ರಷ್ಟಾಚಾರ ವಿರುದ್ಧ ಹೋರಾಟ ಮತ್ತು ತಪ್ಪು ಮಾಡಿದವರ ವಿರುದ್ಧ ಕ್ರಮ ಎಂದು ಹೇಳಿದ್ದೆವು. ಈಗ ಹೇಳಿದಂತೆ ನಡೆಯುತ್ತಿದ್ದೇವೆ. ಹಗರಣಗಳ ತನಿಖೆಗೆ ಎರಡು ಸಮಿತಿ ರಚಿಸಲಾಗಿದೆ. ಶೇ. 40ರಷ್ಟು ಕಮೀಷನ್ ಹಾಗೂ ಹಿಂದಿನ ಸರ್ಕಾರದ ಹಗರಣಗಳ ತನಿಖೆ ಆಗಲಿದೆ. ಹಿಂದಿನ ಸರ್ಕಾರದ ಯÁರೇ ಆಗಲಿ, ಅಽಕಾರಿಗಳಿರಲಿ ಕ್ರಮ ಖಚಿತ ಎಂದರು.
ನಮ್ಮದು ಭ್ರಷ್ಟಾಚಾರ ರಹಿತ ಆಡಳಿತ. ಹೀಗಾಗಿ ಬಿಜೆಪಿ, ಜೆಡಿಎಸ್‌ನ ಹಲವು ಹಾಲಿ, ಮಾಜಿ ಶಾಸಕರು ಪಕ್ಷಕ್ಕೆ ಬರಲು ಮುಂದಾಗಿದ್ದಾರೆ. ಯÁರು ಬರಬೇಕು ಎಂದು ಪಕ್ಷದ ಮುಖಂಡರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.