ಚೌಡಯ್ಯನ ಮೂರ್ತಿ ಭಗ್ನಗೊಳಿಸಿದವರ ಶಿಕ್ಷೆಸಲಿ

15blh1 manavi
Published on

ಬೈಲಹೊಂಗಲ: ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಮುತ್ತುಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿ ಭಗ್ನಗೊಳಿಸಿದ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೆಗೊಳ್ಳುವಂತೆ ತಾಲೂಕು ಉಪವಿಭಾಗದ ಗಂಗಾಮತಸ್ಥರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್​ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಮುದಾಯದ ಉಪವಿಭಾಗದ ಅಧ್ಯ ಮಲ್ಲಪ್ಪ ಮುರಗೋಡ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ವಿರೂಪಗೊಳಿಸಿದವರಿಗೆೆ ಕಠಿಣ ಶಿೆಯಾಗಬೇಕು. ಇಂತಹ ಟನೆ ಮರುಕಳಿಸದಂತೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪತ್ರಕರ್ತ ಬಸವರಾಜ ಕಲಾದಗಿ ಮಾತನಾಡಿ, ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿರುವುದು ಖಂಡನೀಯ. ಮೂರ್ತಿ ವಿರೂಪಗೊಳಿಸಿ ಶಾಂತಿ ಕದಡಿದವರ ವಿರುದ್ಧ ಸಮುದಾಯ ಸಿಡಿದೇಳುವ ಮುನ್ನ ತಪ್ಪಿತಸ್ಥರನ್ನು ಬಂಧಿ-ಸಿ ಕಠಿಣ ಶಿೆ ವಿಧಿಸಬೇಕೆಂದು ಒತ್ತಾಯಿಸಿದರು. ನಿವತ್ತ ತಹಸೀಲ್ದಾರ್​ ರುದ್ರಪ್ಪ ಶಿವಬಸನ್ನವರ, ಗುರುಬಸಪ್ಪ ಸಣ್ಣಮನಿ, ಬಿ.ವೈ.ಪೂಜೇರ, ಬಸಪ್ಪ ಗೋಣಿ, ಬಸವರಾಜ ಪೂಜಾರ, ರಮೇಶ ಉಳ್ಳಿಗೇರಿ, ಸುಭಾಷ ಜಂಬಗಿ, ಶ್ರೀಶೆಲ ಹೋಳಿ, ಮಡಿವಾಳಪ್ಪ ಹೊಸಮನಿ, ಪ್ರಶಾಂತ ಡಾಂಗೆ, ಶಿವು ಬಡವಣ್ಣವರ, ಉಡಚಪ್ಪ ಸಂಕಣ್ಣವರ, ಸಚಿನ ಪೂಜಾರ, ಮಹಾದೇವ ಮಾರಿಹಾಳ, ಭೀಮಪ್ಪ ಕರದೇಮನ್ನವರ, ರವಿ ಮುರಗೋಡ, ಮಲ್ಲೇಶ ಪೂಜಾರ, ಕಿರಣ ಶಿವಬಸಣ್ಣವರ, ಯಲ್ಲಪ್ಪ ಅಮ್ಮಿನಭಾಂವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net