ಗಣತಿ ಮಾದರಿ ರೂಪಿಸಿದವರ ಕಪಾಳಕ್ಕೆ ಹೊಡೆಯಬೇಕು

New yatnala New 22222
Published on

ಹುಬ್ಬಳ್ಳಿ : ಸರ್ಕಾರ ಕೂಡಲೇ ಜಾತಿ ಜನಗಣತಿ ಬಿಡಬೇಕು. ಇದೊಂದು ಮೂರ್ಖ ಸರ್ವೆ. ಗಣತಿಯ ಮಾದರಿ ರೂಪಿಸಿದವರ ಕಪಾಳಕ್ಕೆ ಹೊಡೆಯಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಮೂಲಕ ವ್ಯವಸ್ಥಿತವಾಗಿ ಹಿಂದು ಸಮಾಜವನ್ನು ಒಡೆಯಲಾಗುತ್ತಿದೆ. ಮುಸ್ಲಿಂರಿಗೆ ಅನುಕೂಲ ಮಾಡಿಕೊಡಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ವ್ಯವಸ್ಥಿತರವಾಗಿ ಲಿಂಗಾಯತರು ಮತ್ತು ಒಕ್ಕಲಿಗರನ್ನು ಒಡೆಯುತ್ತಿದೆ. ಇದರ ಲಾಭವನ್ನು ಮುಸ್ಲಿಂರಿಗೆ ತಲುಪಿಸುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ತಮಗೆ ಬೇಕಾದವರಿಗೆ 2ಎ ಗೆ ಸೇರಿಸಿದರು. ಯಡಿಯೂರಪ್ಪ ಲಿಂಗಾಯತನೇ ಅಲ್ಲ. ಲಿಂಗಾಯತರಿಗೆ 2ಸಿ, 2 ಡಿ ಸಿಕ್ಕಿದ್ದರೆ ಅದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ ಎಂದರು.

ಹಿಂದುತ್ವ ಬೇಡ ಎನ್ನುವ ಸ್ವಾಮೀಜಿಗಳು ಕಾವಿ, ಕೇಸರಿ ಬಟ್ಟೆ ತ್ಯಜಿಸಲಿ. ಹಸಿರು ಅಥವಾ ಬಿಳಿ ಬಣ್ಣದ ವಸ್ತ್ರ ಧರಿಸಲಿ ಎಂದು ಯತ್ನಾಳ ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net